ಬೆಳಗಾವಿ/ರಾಮದುರ್ಗ: ಮಂಗಗಳ ಹಾವಳಿ ದಿನದಿಂದ ದಿನಕ್ಕೆ ತೀವ್ರ ಹೆಚ್ಚಾಗಿದ್ದು, ಮನೆಯ ಒಳಗೆ ನುಗ್ಗಿ, ಕೈಗೆ ಸಿಕ್ಕ ಸಾಮಾನುಗಳನ್ನು, ಅಡಿಗೆ ಪದಾರ್ಥಗಳನ್ನು ಹಾಳು ಮಾಡುತ್ತಿವೆ. ಚಿಕ್ಕ ಮಕ್ಕಳ ಮೇಲೆ ಹಾರಿ ಕೈಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಸಿದುಕೊಂಡು ಹೋಗವದಲ್ಲದೇ ಗಾಯಗೋಳಿಸುತ್ತಲಿವೆ. ಅಲ್ಲದೇ ಸಾರ್ವಜನಿಕರು ದಿನಸಿ ಅಂಗಡಿಗಳಲ್ಲಿ ತಂದ ಪದಾರ್ಥಗಳನ್ನು ಕಸಿದುಕೊಂಡು ಹೋಗುತ್ತಲಿವೆ. ಮನೆಗಳಲ್ಲಿನ ಸಿಂಟೆಕ್ಸ ಪೈಪ್ಲೈನ್,ಗಿಡ – ಗಂಟೆಗಳು ಇತ್ಯಾದಿ ನಾಶಮಾಡುತ್ತಿವೆ. ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋದ ಸಾರ್ವಜನಿಕರು ಗಂಭೀರ ಸ್ವರೂಪದ ಗಾಯಗಳಾಗಿವೆ ದವಾಖಾನೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಆಸ್ತಿ ಹಾಳಾಗುವದಲ್ಲದೇ, ಜೀವಭಯದಿಂದ ಕಾಲ ಕಳೆಯುವಂತಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ರಾಮದುರ್ಗ ನೇಕಾರ ಸಮಾಜದ ಸಾರ್ವಜನಿಕರು, ಮಾನ್ಯ ತಹಶೀಲ್ದಾರ್ ರಾಮದುರ್ಗ ಮತ್ತು ವಲಯ ಅರಣ್ಯಾಧಿಕಾರಿಗಳು ರಾಮದುರ್ಗ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ನಿರ್ದೇಶಕರಾದ ಶ್ರೀ ಶಿವಾನಂದ ಬಳ್ಳಾರಿ, ರಾಮದುರ್ಗ ತಾಲೂಕಾ ನೇಕಾರ ಸಮಾಜದ ಅಧ್ಯಕ್ಷರಾದ ಶ್ರೀ ಅಶೋಕ ಸುಳಿಭಾವಿ, ವಕೀಲರಾದ ಶ್ರೀ ಶ್ರೀನಿವಾಸ ಕುರುಡಗಿ, ಶ್ರೀ ನೀಲಕಂಠ ಘಂಟಿ, ಶ್ರೀ ನಾರಾಯಣ ಗಂಗೂರಿ, ಪುಂಡಲೀಕ ವಡಕನ್ನವರ, ವಿನೋದ ಕರದಿನ, ಪರಶುರಾಮ ಧಡಿ, ಕ್ರಷ್ಣ ಬಟಕುರ್ಕಿ, ಶಂಕರ ಮುರುಡಿ, ತುಕಾರಾಮ ಬಲಕುಂದಿ, ಮಹಾದೇವ ಬರಡೂರ, ಕ್ರಷ್ಣ ಬಲಕುಂದಿ ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.