ಬಳ್ಳಾರಿ / ಕುರುಗೋಡು : ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪೋಲಿಯೋ ದಿನ ಪ್ರಯುಕ್ತ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಹನಿ ಹಾಕಿಸಿ ಪೋಲಿಯೋ ವಿರುದ್ಧದ ನಿರಂತರ ಗೆಲುವಿಗಾಗಿ ಕುರಿತಂತೆ ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿಗಳು ನರಸಪ್ಪ ಮತ್ತು ಪುರಸಭೆ ಅಧ್ಯಕ್ಷ ಮಂಜುನಾಥ ಉದ್ಘಾಟಿಸಿ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೊಲಿಯೋ ಹನಿ ಹಾಕುವ ಮುಖಾಂತರ ಚಾಲನೆ ನೀಡಿದರು.
ಕುರುಗೋಡು ತಾಲೂಕಾದ್ಯಂತ 0 ದಿಂದ 05 ವರ್ಷದೊಳಗಿನ ಮಕ್ಕಳ ಟಾರ್ಗೆಟ್ ವಿವರವು 17241 ಇದ್ದು 80 ಬೂತ್ ಗಳಿದ್ದು, 01 ಮೊಬೈಲ್ ಟೀಮ್,02, ಟ್ರಾನ್ಸಿಟ್ ಪಾಯಿಂಟ್ ಪ್ರಸ್ತುತ ಚಾಲ್ತಿಯಿವೆ.
ಪುರಸಭಾ ಸದಸ್ಯರಾದ ಬುಟ್ಟ ಮಲ್ಲಿಕಾರ್ಜುನ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಜವಳಿ ರವರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೊಲಿಯೋ ಹನಿ ಹಾಕುವ ಮುಖಾಂತರ ಚಾಲನೆ ನೀಡಿದರು.
ಆರೋಗ್ಯ ಇಲಾಖೆಯ ವಿರುಪಾಕ್ಷ, ಕೆ.ಮಂಜುನಾಥ
ಡಿ ಸುನೀತಾ, ಮಹಬೂಬ್ ಭಾಷಾ. ಡಿ,
ಮಂಜುನಾಥ, ಗಂಟೆಪ್ಪ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















