
ಬಳ್ಳಾರಿ / ಕಂಪ್ಲಿ : ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನಾಚರಣೆ ಅಂಗವಾಗಿ 22-06-2026 ರ ಭಾನುವಾರ ವಾಸವಿ ಯುವಜನ ಸಂಘ ಹಾಗೂ ಪಟ್ಟಣದ 30 ಬೂತ್ ಗಳು ಸೇರಿದಂತೆ ತಾಲೂಕಿನ ಎಲ್ಲೆಡೆ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿತು.
ಕಂಪ್ಲಿ ಕೋಟೆಯಲ್ಲಿ : ಇಲ್ಲಿನ 1ನೇ ಹಾಗೂ 13ನೇ ವಾರ್ಡಿನಲ್ಲಿ ಬೆಳಿಗ್ಗೆ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1ನೇ ವಾರ್ಡಿನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಸಂಸ್ಥಾಪಕ ಸಂಚಾಲಕರಾದ ಬಡಿಗೇರ್ ಜಿಲಾನಸಾಬ್ ಉದ್ಘಾಟಿಸಿ ಮಾತನಾಡಿ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿಯನ್ನು ಹಾಕಿಸಿ ಎಂದು ತಿಳಿಸಿದರು. ಆಶಾ ಕಾರ್ಯಕರ್ತೆ ಆರ್. ವಲಿಮಾ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ : ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಂಪ್ಲಿ ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ ಜೂಗಲ್ ಅವರು ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಅರುಣ್ ಜಿ., ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಕನಕೇರಿ, ವೈದ್ಯಾಧಿಕಾರಿಗಳಾದ ಡಾ. ಭರತ್ ಪಿ., ಬ್ಲಾಕ್ ಆರೋಗ್ಯ ಶಿಕ್ಷಣಾಧಿಕಾರಿ ಹಿರಿಯ ಆರೋಗ್ಯ ನಿರೀಕ್ಷಕರು ಆರೋಗ್ಯ ನಿರೀಕ್ಷಕರು ಶುಶ್ರೂಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜೆಸಿಐ ಕಂಪ್ಲಿ ಸೋನಾ ವತಿಯಿಂದ : ರಾಷ್ಟ್ರೀಯ ಪಲ್ಸ್ ಪೋಲಿಯೋ ರೋಗನಿರೋಧಕ ದಿನಾಚರಣೆಯ ಅಂಗವಾಗಿ, ಎಸ್.ಎನ್. ಪೇಟೆಯ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಮೀಪ ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಬೂತ್ (ಲಸಿಕಾ ಕೇಂದ್ರ) ಉದ್ಘಾಟನೆಯನ್ನು ಹಿರಿಯ ಜೆಸಿ ಹಾಗೂ ಪೂರ್ವಾಧ್ಯಕ್ಷರಾದ ಜೆಸಿ ಹೇಮಯ್ಯ ಸ್ವಾಮಿ ಅವರು ಬೂತ್‌ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಸಿ ಡಾ. ಭರತ್ ಪದ್ಮಶಾಲಿ, ಜೆಸಿ ಡಾ. ಸುಧಾಕರ್, ಜೆಸಿ ಡಾ. ಶ್ರದ್ಧಾ ಭರತ್, ಅರುಂಧತಿ ಸುಧಾಕರ್, ಜೆಸಿ ಚಂದ್ರಶೇಖರ್ ಗೌಡ, ಜೆಸಿ ರಮೇಶ್ ಬೆಲಂಕಾರ್, ಜೆಸಿ ರಾಕೇಶ್ ಬಾಗ್ರೇಚಾ, ಎಚ್. ಜಿ. ಎಫ್. ಜಿಲನಸಾಬ್, ಜೆಸಿ ಭರತ್ ಡಿ., ಜೆಸಿ ಪೂಜಾ ಭರತ್, ಜೆಸಿ ಇಮ್ತಿಯಾಜ್, ಜೆಸಿ ವೆಂಕಟ ಸಪ್ತಗಿರಿ, ಜೆಸಿ ಗುರುಶಾಂತ ಶಾಸ್ತ್ರಿ, ಜೆಸಿ ಮನೋಜ್ ದಾನಪ್ಪ, ಜೆಸಿ ರಮೇಶ್, ಜೆಸಿ ಅಕ್ಕಿ ಜೀಲನ್, ಜೆಸಿ ಸೋಹೇಲ್, ಜೆಸಿ ಮಾನಸ, ಜೆಸಿ ಪವಿತ್ರ, ಸುಮನ್ ಪದ್ಮಶಾಲಿ, ಜಯಮ್ಮ ಹಾಗೂ ಮಂಜುನಾಥ ಉಪಸ್ಥಿತರಿದ್ದರು.
ಒಟ್ಟು 193 ಮಕ್ಕಳು ಪೋಲಿಯೋ ಲಸಿಕೆ ಪಡೆದು ಪ್ರಯೋಜನ ಪಡೆದರು.
ಕಣ್ವಿತಿಮ್ಮಲಾಪುರ ಗ್ರಾಮದಲ್ಲಿ : ಬಸವಶ್ರೀ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪೂಜಾರ್ ಉದ್ಘಾಟಿಸಿ ಮಾತನಾಡಿ 5 ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ 2 ಹನಿ ಪೋಲಿಯೊ ಹಾಕಿಸುವುದರ ಮೂಲಕ ಪೋಲಿಯೊ ಮುಕ್ತರನ್ನಾಗಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಅರುಣಾಕ್ಷಿ, ಆಶಾ ಕಾರ್ಯಕರ್ತೆರಾದ ಟಿ.ಜ್ಯೋತಿ, ಜಿ.ಶಿಲ್ಪ, ಅಂಗನವಾಡಿ ಕಾರ್ಯಕರ್ತೆ ಹೊಳೆಯಮ್ಮ, ಪ್ರಮುಖರಾದ ಶಿವಪ್ಪ, ಟಿ. ಕುಬೇರ, ಎನ್ ರಾಘವೇಂದ್ರ, ವಿರೇಶ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















