ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಟ್ಟೂರು : ಪಂಚಮಸಾಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಕೊಟ್ಟೂರು :ಕೊಟ್ಟೂರು ತಾಲೂಕು ಪಂಚಮಸಾಲಿ ಸಮುದಾಯದ ವತಿಯಿಂದ ಪಂಚಮಸಾಲಿ ಪ್ರತಿಭಾವಂತ ಮಕ್ಕಳಿಗೆ ಶುಕ್ರವಾರ ಮರುಳುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .

ಈ ಕಾರ್ಯಕ್ರಮವನ್ನು ಪಂಚಸಾಲಿ ತಾಲೂಕು ಪಧಾದಿಕಾರಿಗಳು ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಹಾಕುವುದರ ಮೂಲಕ ಚಾಲನೆ ನೀಡಿದರು.
ಪಂಚಮಸಾಲಿ ಅಧ್ಯಕ್ಷರಾದ ಚಾಪಿ ಚಂದ್ರಪ್ಪ ರವರು ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ
ಪಂಚಮಸಾಲಿ ಸಮುದಾಯ 2020 ನೇ ಸಾಲಿನಿಂದಲೂ ಇಲ್ಲಿಯವರೆಗೆ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ನಿರಂತರವಾಗಿ ಪ್ರತಿವರ್ಷ ಸನ್ಮಾನ ಮಾಡಿ ಗೌರವಿಸುತ್ತಾ ಬಂದಿದ್ದೇವೆ. ಈ ಕಾರಣಕ್ಕಾದರೂ ನಮ್ಮ ಸಮುದಾಯ ಒಂದುಕಡೆ ಸೇರಿ ಪ್ರೀತಿ ವಿಶ್ವಾಸ, ಸಂತೋಷಗಳ ಹಂಚಿಕೊಳ್ಳುವ ವೇದಿಯಾಗಿದೆ ಎಂದು ಹೇಳಿದರು.

ಬಸಾಪುರದ ಪಂಪಾಪತಿ ಮಾತನಾಡಿ ಸಮೂದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಬರಬೇಕು. ಸಮುದಾಯದ ಮಕ್ಕಳಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರ ಜೊತೆಗೆ ಪ್ರೋತ್ಸಾಹ ಧನ ನೀಡುವಂತಾಗಲಿ.
ಪಂಚಮಸಾಲಿ ಸಹಕಾರಿ ಬ್ಯಾಂಕ್ ನಿಂದ 1.27 ಕೋಟಿ ಹಣವನ್ನು ಸಾಲ ನೀಡಲಾಗಿದೆ. ಸಮುದಾಯದ ಬ್ಯಾಂಕ್ ಸದೃಢವಾಗಿ ಬೆಳೆಯುತ್ತಿದೆ. ಸಮುದಾಯದಲ್ಲಿ ಉಳ್ಳವರು ಅರ್ಥಿಕ ಸಹಕಾರ ನೀಡಬೇಕು ಎಂದು ಹೇಳಿದರು.

ನಮ್ಮ ಸಮುದಾಯದ ಮುಖಂಡರು 90 ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಪ್ರೋತ್ಸಾಹ ನೀಡುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ, ನಂಬಿಕೆ, ಶಕ್ತಿ ನೀಡಿದಂತೆ ಆಗುತ್ತದೆ. ನಾವೆಲ್ಲರೂ ಸಮುದಾಯಕ್ಕೆ ಆಭಾರಿಗಳಾಗಿದ್ದೇವೆ ಎಂದು ಪ್ರತಿಭಾವಂತ ವಿಧ್ಯಾರ್ಥಿನಿ ಶ್ರಾವಣಿ ಸಮುದಾಯ ಮುಖಂಡರಿಗೆ ಅಭಿನಂದನೆ ನುಡಿ ಸಲ್ಲಿಸಿದರು.

ಮಕ್ಕಳು ಮಾನಸಿಕ ಖಿನ್ನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ತಂದೆ ತಾಯಿಯರು ಮಕ್ಕಳ ಎದುರು ಒಬ್ಬರನ್ನೊಬ್ಬರು ಬಿಟ್ಟುಕೊಟ್ಟು ಮಾತನಾಡಬಾರದು ನಿಮ್ಮ ಒಗ್ಗಟ್ಟಿನಲ್ಲಿ ಮಕ್ಕಳ ಭವಿಷ್ಯ ಮತ್ತು ಜೀವನ ನಿಂತಿದೆ. ಮಕ್ಕಳು ಭವಿಷ್ಯತ್ತಿನಲ್ಲಿ ಒಂದೇ ಆಯ್ಕೆಗೆ ಸೀಮಿತವಾಗಬೇಡಿ ಅನೇಕ ಹುದ್ದೆಗಳು ಇವೆ ಅವುಗಳನ್ನು ಆಯ್ಕೆ ಮಾಡಿಕೊಳ್ಳಿ ವಕೀಲ ವೃತ್ತಿ ಕೂಡ ಒಂದು ಶ್ರೇಷ್ಠವಾದದ್ದು. ಮಕ್ಕಳ ಕಲಿಕೆಯಲ್ಲಿ ತಾಯಿ ಪಾತ್ರ ಮೊದಲಿದೆ. ಹೆಣ್ಣು ಮಕ್ಕಳನ್ನು ಕಿತ್ತೂರು ರಾಣಿ ಚೆನ್ನಮ್ಮನಂತೆ, ಧೈರ್ಯ, ಚಾಣಕ್ಷತನ ಬುದ್ಧಿಶಕ್ತಿ ತುಂಬಿ ಬೆಳಸಿ. ನಮ್ಮ ಬದುಕಿನ ಮಿತ್ರ ಹಾಗೂ ಶತ್ರು ನಮ್ಮ ವರ್ತನೆಯೇ ಆಗಿರುತ್ತದೆ ಎಂದು ಸವಿತಾ ರಮೇಶ್ ವಕೀಲರು ತಮ್ಮ ಪ್ರೇರಣಾ ನುಡಿಯಲ್ಲಿ ಹೇಳಿದರು.

ನಮ್ಮ ಪಂಚಮಸಾಲಿ ಬ್ಯಾಂಕ್ ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿದೆ. ನಮ್ಮ ಎಲ್ಲಾ ನಿರ್ದೇಶಕ ಹಾಗೂ ಸಮುದಾಯ ಮುಖಂಡರ ಪಾತ್ರ ಮಹತ್ವದ್ದಾಗಿದೆ. ಪಂಚಮಸಾಲಿ ಬ್ಯಾಂಕ್ ರಚನೆಗೊಳ್ಳಲು ಅನೇಕರ ಶ್ರಮವಿದೆ ಎಂದು ಅವರೆಲ್ಲರನ್ನೂ ಸ್ಮರಿಸಿದರು. ನಮ್ಮ ಬ್ಯಾಂಕ್ 10 ಲಕ್ಷದವರೆಗೂ ಸಾಲ ಕೊಡುವಷ್ಟು ಬಲಿಷ್ಠವಾಗಿದೆ. ತಂದೆ ತಾಯಿಗೆ ಗೌರವ ಕೊಡದ ಮಕ್ಕಳಿಂದ ಯಶಸ್ಸು ,ಸಾಧನೆ ನಿರೀಕ್ಷೆ ಮಾಡಲು ಅಸಾಧ್ಯ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯ. ಮಕ್ಕಳಲ್ಲಿ ವ್ಯಾಪಾರ ಗುಣ ಬೆಳೆಸಬೇಕು ಎಂದು ಪಂಚಮಸಾಲಿ ಬ್ಯಾಂಕ್ ಅಧ್ಯಕ್ಷ ವಿವೇಕಾನಂದ ಹೇಳಿದರು.

2025-26 ನೇ ಸಾಲಿಗೆ ಎಸ್. ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ,ಯು. ನಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕ ಪಡೆದ 68 ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಮುದಾಯ ನೌಕರ ಸಂಘದ ಅಧ್ಯಕ್ಷ ಮರುಳುಸಿದ್ದಪ್ಪ, ಗಾಯತ್ರಿ ಅಶೋಕ, ಹಳ್ಳಿ ಅಶೋಕ, ತುಪ್ಪದ ವೀರೇಶ್, ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಎಲ್ಲಾ ಸಮುದಾಯ ಮುಖಂಡರು ,ನೌಕರರು, ಜನರು ಭಾಗವಹಿಸಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!