ಸುರಪುರ ಸುದ್ದಿ : ತಾಲೂಕಿನ ಕುರುಬನ ತಳ್ಳಳ್ಳಿ ಗ್ರಾಮದ ಆರಾಧ್ಯ ದೈವ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೋಹರಂ ಹಬ್ಬದ ನಿಮಿತ್ತ ಶುಕ್ರವಾರ ಮೊಹರಂ ಕೊನೆ ದಿನದ ಅಂಗವಾಗಿ ಅಲಾಯಿ ದೇವರುಗಳ ದಫನ್ ಕಾರ್ಯ ಸಂಪನ್ನಗೊಂಡಿತು.
ಸಾವಿರಾರು ಭಕ್ತರ ಜಯಘೋಷದ ಮಧ್ಯೆ ಸಾಯಂಕಾಲ 7:00 ಗಂಟೆಗೆ ಗ್ರಾಮದ ಹೋರವಲಯದ ಹಿರೇ ಹಳ್ಳದ ದಡದಲ್ಲಿ ಅಲಾಯಿ ದೇವರುಗಳ ದಫನ್ ಕಾರ್ಯ ಮಾಡಲಾಯಿತು.
ಗುರುವಾರ ಕಥಾಲ್ ರಾತ್ರಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶುಕ್ರವಾರ ಬೆಳಗಿನ ಜಾವ ದೇವರ ಗಂಗಸ್ಥಳದ ನಂತರ ಸಕಲ ದೈವದ ಮಧ್ಯೆ ದೇವರ ಅಗ್ಗಿ ತುಳಿಯುವ ಕಾರ್ಯಕ್ರಮ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರ ಸವಾರಿ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಹಾಗೂ ಕೆ. ತಳ್ಳಳ್ಳಿ ಗ್ರಾಮದ ಸರ್ವರೂ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















