ಬಳ್ಳಾರಿ / ಕಂಪ್ಲಿ : ಗಂಗಾಮತ ಸಮಾಜವೂ ಶಿಕ್ಷಣ ಸೇರಿದಂತೆ ನಾನಾ ರಂಗದಲ್ಲಿ ಹಿಂದುಳಿದ್ದು, ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಗಾಮತಸ್ಥರ ಕಡೆಗೆ ಹೆಚ್ಚಿನ ಗಮನ ಹರಿಸಿ, ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡ(ಎಸ್.ಟಿ)ಕ್ಕೆ ಸೇರಿಸಬೇಕೆಂದು ಕಂಪ್ಲಿ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಎಲೆಗಾರ ನಾಗರಾಜ ಒತ್ತಾಯಿಸಿದರು.
ಪಟ್ಟಣದಲ್ಲಿರು ಗಂಗಾಮತ ಸಮಾಜದ ಸಮುದಾಯ ಭವನದಲ್ಲಿ ಬುಧವಾರ ಗಂಗಾಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮದ ಗಂಗಾದೇವಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾಜವು ಹಿಂದುಳಿದೆ. ಮತ್ತು ಸರ್ಕಾರದ ಸೌಲಭ್ಯಗಳು ಅಷ್ಟಕಷ್ಟೇ ಎಂಬಂತಿದೆ ಆದ್ದರಿಂದ ಎಸ್.ಟಿ ಮೀಸಲಾತಿ ನೀಡಿದರೆ, ಸಮಾಜದ ಅಭಿವೃದ್ಧಿ ಸಾಧ್ಯ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಂಗಾಮಾತೆಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಂಗಾಮತ ಸಮಾಜದವರು ಮಕ್ಕಳಿಗೆ ತಪ್ಪದೇ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜ ಅಭಿವೃದ್ಧಿಯೊಂದಿಗೆ ಬದವಾಣೆ ಹೊಂದಲು ಸಾಧ್ಯ ಎಂದರು.
ಮೊದಲಿಗೆ ತುಂಗಭದ್ರಾ ನದಿ ತಟದಲ್ಲಿರುವ ಆರಾಧ್ಯ ದೇವತೆ ಗಂಗಾದೇವಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಇಲ್ಲಿನ ಸಮುದಾಯ ಭವನದಲ್ಲಿರುವ ಗಂಗಾದೇವಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕರೇಕಲ್ ಪ್ರಕಾಶ್, ಬಿ.ಸಿದ್ದಪ್ಪ, ಕರೇಕಲ್ ಮನೋಹರ್, ಈರಪ್ಪ, ಬಿ.ಈರಪ್ಪ, ಕೆ.ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಬಿ. ರಮೇಶ, ನಡವಿ ಮಲ್ಲಿಕಾರ್ಜುನ, ಟಿ.ಮಲ್ಲಿಕಾರ್ಜುನ, ಟಿ.ಗಂಗಣ್ಣ, ಅಯೋದಿ ರಮೇಶ್, ಇಟಗಿ ವಿರುಪಾಕ್ಷಿ, ಡಿ.ರಮೇಶ್, ಸಣ್ಯಪ್ಪ, ವೀರೇಶ್, ಎಸ್.ಸುರೇಶ್, ಸುಣಗಾರ ಮಹೇಶ್, ಇಟಗಿ ಈರಣ್ಣ, ಅಯೋದಿ ವೆಂಕಟೇಶ್, ಆನೆಗುಂದಿ ತಾಯಣ್ಣ, ಜಂಗಾ ವೀರೇಶ್, ಬಸವರಾಜ, ಮಂಜುನಾಥ್, ಜಿ.ಯಲ್ಲಪ್ಪ, ಅರವಿಂದ, ಬೆಂಕೆಪ್ಪ, ಶರಣ, ಪರಶಪ್ಪ, ಮಲ್ಲಯ್ಯ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















