ಕನಕಗಿರಿ : ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ಮಾಹಿತಿಯನ್ನು ನೀಡಲು ಕುಮಾರಿ ಸೌಜನ್ಯ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರರು ನಮ್ಮ ಶಾಲೆಗೆ ಭೇಟಿ ನೀಡಿ ನಮ್ಮ ಶಾಲೆಯ ಎಲ್. ಕೆ.ಜಿ ಇಂದ 7ನೇ ತರಗತಿ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ನ ಪರಿಚಯ, ಅದರ ಧ್ಯೇಯ, ಉದ್ದೇಶಗಳು, ಅದರ ಗುರಿಗಳು ಮತ್ತು ಅದರಲ್ಲಿ ಬರುವ ವ್ಯಾಯಾಮಗಳ ಕುರಿತು ಸವಿವರವಾಗಿ ವಿದ್ಯಾರ್ಥಿಗಳಿಗೆ ತಾವುಗಳು ಮಾಡಿ ತೋರಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸರಿಯ ಮುಖ್ಯ ಗುರುಗಳಾದ ಶ್ರೀ ನಾಗೇಶ್ ಮಾಟೂರ್ ಕನಕಗಿರಿ ಉತ್ತರ ವಲಯ ಸಿಆರ್ ಪಿ ಯಾಗಿರುವ ಶ್ರೀ ರಾಜೇಶ್ ಮತ್ತು ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು.
- ಕರುನಾಡ ಕಂದ ಸುದ್ದಿ



















