
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ರಬಕವಿ ಜಾಂಬೋಟಿ ರಸ್ತೆಯಲ್ಲಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಗೈ ಬಂಟನಾದ ಶಬ್ದವೇದಿ ಪರಿಣಿತ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸರ್ಕಲ್ ಇದ್ದು, ಇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಸಮಾಜದ ಹಿರಿಯರು, ಊರಿನ ಹಿರಿಯರು ಹೋರಾಟಗಾರರಿಂದ ಅನುದಾನ ಬಿಡುಗಡೆ ಗೊಳಿಸಬೇಕೆಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪರಮಪೂಜ್ಯ ಶ್ರೀ ಕೃಷ್ಣಪ್ಪ ಮಹಾರಾಜರು ಮೂಡಲಗಿ ಬೆಳವಡಿ ವಡ್ಡರ ಯಲ್ಲಣ್ಣ ಇತಿಹಾಸವನ್ನು ಎಳೆ ಎಳೆಯಾಗಿ ತಿಳಿಸಿದರು.
ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಸುಟ್ಟಟ್ಟಿ, ಶ್ರೀ ಕವಿಸ್ವಾಮಿಗಳು ವಿಜಯಪುರ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮೈಸೂರು ಇವರುಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಆನಂದ್ ವಡ್ಡರ್, ಮುತ್ತಪ್ಪ ವಡ್ದರ್, ಸದಾಶಿವ ವಡ್ಡರ್, ವಿಕಾಸ್ ಮನವಡ್ಡರ್, ಸುರೇಶ್ ಬಂಡಿವಡ್ಡರ್, ಸುನಿಲ್ ತಿಮ್ಮಾಪುರ್, ಚೌಡಪ್ಪ ಪಾತ್ರೋಟ, ಪರಶುರಾಮ ಪಾತ್ರೋಟ, ಉಮೇಶ್ ಪಾತ್ರೋಟ, ಕುಮಾರ್ ಪಾತ್ರೋಟ, ಮಾನಿಂಗ ಪಾತ್ರೋಟ, ಸತೀಶ್ ಪಾತ್ರೋಟ, ಕುಮಾರ್ ಪಾತ್ರೋಟ, ಪ್ರವೀಣ್ ಪಾತ್ರೋಟ, ಬಂದು ಪಕಾಲಿ, ಸಿದ್ದು ಉಳ್ಳಾಗಡ್ಡಿ, ಲಕ್ಷ್ಮಣ ಬ್ಯಾಳಿ ರೈತ ಸಂಘ ಮಹಾಲಿಂಗಪುರ, ನಾಗೇಶ್ ಭಜಂತ್ರಿ ಶ್ರೀ ರಾಮ ಸೇನಾ ಅಧ್ಯಕ್ಷರು, ಮಧು ಮಾವಿನಹಿಡ್ಡಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಹೋರಾಟದ ನೇತೃತ್ವವನ್ನು ಅರ್ಜುನ್ ಬಂಡಿ ವಡ್ಡರವರು ವಹಿಸಿಕೊಂಡಿದ್ದರು.



















