ಬಳ್ಳಾರಿ / ಕಂಪ್ಲಿ: ಕಂಪ್ಲಿಯಲ್ಲಿ ಡಾ.ಮೌಲಾನಾ ಅಬುಲ್ ಕಲಾಂ ಅಜಾದ್ ಮುಸ್ಲಿಂ ಅಭಿವೃದ್ಧಿ ಸಮಿತಿಯಿಂದ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್)ಕುರಿತು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ರಾಜಾಭಕ್ಷಿ ಮಾತನಾಡಿ, ಎಸ್ಐಆರ್ ಗಾಗಿ ಮನೆಗೆ ಗಣತಿದಾರರು ಬಂದಾಗ ಅಗತ್ಯ ದಾಖಲೆಗಳನ್ನು ಒದಗಿಸಲು ಈಗಲೇ ದಾಖಲಾತಿ ಸಂಗ್ರಹಿಸಿಟ್ಟುಕೊಟ್ಟುವಂತೆ, ಸೂಕ್ತ ಮಾಹಿತಿಯನ್ನು ತಪ್ಪಿಲ್ಲದಂತೆ ನೀಡುವಂತೆ, ಹೆಸರು, ವಿಳಾಸ, ಅಥವಾ ವಯಸ್ಸಿನಲ್ಲಿ ಯಾವುದೇ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಫಾರ್ಮ್ಗಳನ್ನು ಭರ್ತಿ ಮಾಡುವ ವಿಧಾನ ಬಿಎಲ್ಒ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ಹೇಗೆ ಸಂಪರ್ಕಿಸಬೇಕು ಎಂಬ ಬಗ್ಗೆ ಮಾರ್ಗದರ್ಶನದ ಬಗ್ಗೆ ತಿಳಿಸಿದರು. ಸಮಿತಿಯ ಪದಾಧಿಕಾರಿಗಳಾದ ಸೈಯ್ಯದ್ ರಾಜಾಸಾಬ್, ಸೈಯ್ಯದ್ ಬಾಬುಸಾಬ್, ಅಲ್ಲಾಭಕ್ಷಿ, ಹುಸೇನ್ಬಾಷಾ, ನೂರ್ಬಾಷಾ, ಎಂ.ಮೆಹಬೂಬ್, ಹೊನ್ನೂರಸಾಬ್, ಮೆಹ ಬೂಬ್, ಬುಡೇನ್ಸಾಬ್, ಹಸೇನ್ ಸಾಬ್ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















