ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರುಗೆ ಸಚಿವ ನೀಡುವಂತೆ ಒತ್ತಾಯ

ಬಳ್ಳಾರಿ / ಕಂಪ್ಲಿ : ಸತತ ಮೂರು ಬಾರಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿರುವ ಗಂಗಾಮತ ಸಮಾಜದ ತಿಪ್ಪಣ್ಣಪ್ಪ ಕಮಕನೂರು ಇವರಿಗೆ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ನೀಡಬೇಕೆಂದು ಎಮ್ಮಿಗನೂರು ಗಂಗಾಪರಮೇಶ್ವರಿ ಸೇವಾ ಸಮಿತಿ ಅಧ್ಯಕ್ಷರಾಗಿ ಈರಣ್ಣ ಒತ್ತಾಯಿಸಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಗಂಗಾಮತ ಸಮಾಜದ ಗಂಗಾದೇವಿ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಮ್ಮಿಗನೂರು, ಕಂಪ್ಲಿ ಸೇರಿದಂತೆ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಗಂಗಾಮತ (ಬೆಸ್ತರ) ಜನಸಂಖ್ಯೆ ಇದ್ದಾರೆ. ಈ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇಂದಿಗೂ ತಳಮಟ್ಟದಲ್ಲಿರುವ ಈ ಬಲಿಷ್ಠ ಸಮಾಜವು ಪ್ರಗತಿಯ ಪಥದತ್ತ ಮುನ್ನುಗ್ಗಲು, ಸಮಾಜದ ಧ್ವನಿಯಾಗಿ ರಾಜ್ಯ ಮಟ್ಟದಲ್ಲಿ ಕೆಲಸ ನಿರ್ವಹಿಸಲು ರಾಜಕೀಯ ಚತುರನ ಅವಶ್ಯಕತೆ ಇದೆ. ಆದ್ದರಿಂದ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರುಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗುಂಡ್ರಾಣಿ ಜಡೆಪ್ಪ, ಕಾರ್ಯದರ್ಶಿ ಲಬೇದ್ ಜಡೆಪ್ಪ, ಖಜಾಂಚಿ ಬಿ.ಈರಣ್ಣ, ಸಂಚಾಲಕ ಡಿ.ಹುಲುಗಪ್ಪ, ಸದಸ್ಯರಾದ ಬಿ.ವೆಂಕಟೇಶ, ಸಣ್ಣ ಜಡೆಪ್ಪ, ಕೆ.ದರ್ಮಣ್ಣ, ಜಗನಪ್ಪ, ಎಸ್.ಮಾರೆಪ್ಪ, ಹೆಚ್.ರಾಮಾಂಜಿನಿ, ಯು.ನಾಗಪ್ಪ, ಎಸ್.ಮಹೇಶ, ಎ.ಬಾಸ್ಕರ, ಬಿ.ಎಂ.ರೇಣುಕಾನಂದ ಸೇರಿದಂತೆ ಸಮಾಜದವರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!