ವಿರಾಜಪೇಟೆ :ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಶೃದ್ದೆಯಿಂದ ಆಚರಿಸಿದರು.
ಗೃಹ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಬೆಂಗಳೂರು ನಗರದ ಆಧುನಿಕತೆಗೆ ಮೆರಗು ನೀಡುವಂತಹ ಸೊಬಗನ್ನು ಅಂದಿನ ಕಾಲದಲ್ಲಿ ಕೆಂಪೇಗೌಡರು ಕನಸು ಕಂಡಿದ್ದರು. ಸೌಹಾರ್ದ ನಾಡು, ಸಮೃದ್ಧ ನಾಡಿಗಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರು ಇಂದು ಕರ್ನಾಟಕದ ರಾಜ್ಯಧಾನಿಯಾಗಿ ಜಾಗತಿಕ ವಲಯದಲ್ಲಿ ಬೆಂಗಳೂರಿಗೆ ಹೆಸರು ಬರುವಂತಾಗಿದೆ. ಕೆಂಪೇಗೌಡರ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ. ಕೆಂಪೇಗೌಡರ ದೂರದೃಷ್ಟಿ, ತ್ಯಾಗ ಹಾಗೂ ಕಠಿಣ ಪರಿಶ್ರಮವನ್ನು ನಾವೆಲ್ಲರೂ ಪಾಲಿಸಿಕೊಂಡಲ್ಲಿ ಉತ್ತಮ ನಾಡು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಮಾಜಿ ಪುರಸಭೆ ಸದಸ್ಯರು ರಾಜೇಶ್ ಪದ್ಮನಾಭ, ತಾಲೂಕು ಕೆ ಡಿ ಪಿ ಸದಸ್ಯರು ರಫೀಕ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯರು ಆಲಿರ ರಶೀದ್, ಪಕ್ಷದ ಮುಖಂಡರು ಸೂರಜ್ ಹೊಸೂರು, ಅಜ್ಜಿಕುಟ್ಟಿರ ಗಿರೀಶ್, ಕುಂಡಚ್ಚಿರ ಮಂಜು ದೇವಯ್ಯ, ಬಟ್ಟಕಾಳಂಡ ರಾಜ ದಿನೇಶ್, ಕೆಟೊಳಿ ಮೋಹನ್ ರಾಜ್, ವರ್ಗಿಸ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ




















