ತೀರ್ಥಹಳ್ಳಿಯ ಸಮೀಪದಲ್ಲಿರುವ ರಂಜದಕಟ್ಟೆ ಹತ್ತಿರ ಲಕ್ಕುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ ಮರದಲ್ಲಿ ಮೇಗರವಳ್ಳಿ ಕರುಣಾಪುರಕ್ಕೆ ಹೋಗಿ ಹಿಂದಿರುಗುವಾಗ ಮರದಲ್ಲಿ ಮರಗೆಸವನ್ನು ನೋಡಿದ್ದಾನೆ ಮಳೆಗಾಲದಲ್ಲಿ ಮಲೆನಾಡಿನಿಗೆ ಮರ ಗೆಸ ಅತ್ಯುತ್ತಮ ಖಾದ್ಯವಾಗಿದೆ ಆ ಎಲೆಯನ್ನು ನೋಡಿದವನಿಗೆ ಆ ಮರಗೆಸವನ್ನು ಕೀಳ ಬೇಕೆಂದು ಮರ ಹತ್ತಿದ್ದಾನೆ ಮರದ ಮೇಲೆ 11000 kv ಹಾದು ಹೋಗಿದ್ದು , ಆ ವಿದ್ಯುತ್ ತಂತಿ ಹಾದು ಹೋಗಿದ್ದು ಅವನ ಕಣ್ಣಿಗೆ ಮರ ಹತ್ತಿದಾಗ ಕಾಣದಿದ್ದಾಗ ಮರಗೆಸ ಕುಯ್ಯುತ್ತಿರುವಾಗ ತನ್ನ ದೇಹಕ್ಕೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ ಮರದಲ್ಲಿ ಸಾವನ್ನಪ್ಪಿರುತ್ತಾನೆ .
ಯುವಕನ ಹೆಸರು ಅಭಿಷೇಕ್ ಶೆಟ್ಟಿ ಎಂದು ತಿಳಿದು ಬಂದಿದ್ದು ಇವನು ತೀರ್ಥಹಳ್ಳಿಯ ಇಂದ್ರ ನಗರ ವಾಸಿಯಾಗಿರುತ್ತಾನೆ, ಸುಮಾರು 28 ವರ್ಷ ವಯಸ್ಸಾಗಿದೆ ಅವಿವಿವಾಹಿತ ನಾಗಿದ್ದಾನೆ ಹಾಗೂ ತಂದೆ ತಾಯಿ ಇಲ್ಲದ ಕಾರಣ ತನ್ನ ಚಿಕ್ಕಮ್ಮನ ಮಗಳ ಮನೆಯಲ್ಲಿ ವಾಸವಾಗಿದ್ದಾನೆ, ಅಭಿಷೇಕನನ್ನು ಕಳೆದುಕೊಂಡು ಕುಟುಂಬಸ್ಥರು ತುಂಬಾ ದುಃಖ ತಪ್ತರಾಗಿದ್ದಾರೆ, ಸಾರ್ವಜನಿಕರು ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸರಿಯಾದ ಮರಗಳ ಕಡಿತಲೆ ಕೆಲಸಗಳನ್ನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ, ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ :ಪ್ರಸಾದ್ ಎಚ್. ಬಿ. ತೀರ್ಥಹಳ್ಳಿ.




















