
ಕುಷ್ಟಗಿ ತಾಲೂಕಿನ
ಮೆಣಸಗೇರಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಮೂರನೇ ದಿನದ ಸವಾರಿ ಕಾರ್ಯಕ್ರಮ ಭಕ್ತಿಯಿಂದ ನಡೆಯಿತು. ಗ್ರಾಮದ ಹಸನ್ ಹುಸೇನ್ ಅವರ ಪಂಜಾವನ್ನು ಪ್ರತಿಷ್ಟಾಪಿಸಲಾಯಿತು ಅಂದು ಬೆಳಗಿನ ಜಾವಾ ಕಲಾಲ್ ಬಂಡಿ ಯವರ ನೇತೃತ್ವದಲ್ಲಿ ಮೂರನೇ ದಿನದ ಸವಾರಿ ನಡೆಸಿ ಭಕ್ತರಿಗೆ ಆಶೀರ್ವಚನ ನೀಡಿದರು. ನಾಡಿನಲ್ಲಿ ಮಳೆ ಬೆಳೆಯು ಸಮೃದ್ಧಿ ಆಗಲಿದೆ ಎಂದು ಹೇಳಿಕೆ ನೀಡಿದರು. ಗ್ರಾಮದಲ್ಲಿ ದರ್ಗಾದಿಂದ ದೇವಸ್ಥಾನಗಳಿಗೆ ಪೂಜೆ ನಡೆಸಲಾಯಿತು ದೇವರ ಮೆರವಣಿಗೆ, ಉದ್ದಕ್ಕೂ ಭಕ್ತರು ಸಕ್ಕರೆ ಮಾದಲಿ ನೀಡಿ ಭಕ್ತಿ ಸಮರ್ಪಿಸಿದರು. ಸವಾರಿ ವೀಕ್ಷಿಸಲು ಗ್ರಾಮದ ಸಾರ್ವಜನಿಕರು ತಂಡೋಪವಾಗಿ ಬಂದಿದ್ದರು ಧಾರ್ಮಿಕ ವಿಧಿ ವಿಧಾನಗಳಿಂದ ಕಾರ್ಯಕ್ರಮ ಜರಗಿದವು. ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯ ಗುರು ಹಿರಿಯರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.




















