ನಂಜನಗೂಡು ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ವತಿಯಿಂದ ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಮಾರಂಭವನ್ನು ಗಣ್ಯ ವ್ಯಕ್ತಿಗಳೆಲ್ಲರೂ ಗೌರವ ಗೀತೆಗಳನ್ನು ಹಾಡುವುದರ ಮೂಲಕ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟನೆಯನ್ನು ಮಾಡಿದರು. ಸಮಾರಂಭವನ್ನು ಉದ್ದೇಶಿಸಿ ರಾಜ್ಯ ಮಹಿಳಾ ಗ್ಯಾರೆಂಟಿ ಯೋಜನೆ ಉಪಾಧ್ಯಕ್ಷರಾದ ಡಾಕ್ಟರ್ ಪುಷ್ಪ ಅಮರನಾಥ್ ಅವರು ಮಾತನಾಡಿ ಶ್ರೀಮತಿ ಇಂದಿರಾಗಾಂಧಿಯವರು ಮಹಿಳೆಯರು ಕೂಡ ದೇಶವನ್ನು ಆಳಬಹುದೆಂದು ತೋರಿಸಿದ್ದಾರೆ. ಮಹಿಳೆಯರು ಇಂದು ಅಡಿಗೆ ಮನೆಯಿಂದ ಬಾಹ್ಯಾಕಾಶದ ಅಂತರಿಕ್ಷದವರೆಗೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಲ್ಲಾ ರಂಗಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಮಹಿಳಾ ಶಕ್ತಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು. ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಶಾಸಕರಾದ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕರಾದ ಕಡಲೆ ಕೇಶವಮೂರ್ತಿ, ದಂಡಾಧಿಕಾರಿಗಳಾದ ಡಾಕ್ಟರ್ ಸ್ಮಿತಾ ರಾಮು, ಯೋಜನಾ ಅಧ್ಯಕ್ಷರಾದ ಮಾರುತಿ ಮುಂತಾದ ಗಣ್ಯರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















