ಗಾಜಿನ ಬಟ್ಟಲಲಿ ತೇಲಿದೆ ಹಳದಿ ಸೇವಂತಿಗೆ
ಕೆಂಬಣ್ಣದ ಗುಲಾಬಿ ನಗುತಿದೆ ಜೊತೆ ಜೊತೆಗೆ
ಪೀಠದಲಿ ಮತ್ತೊಂದು ಬಣ್ಣದ ಪುಷ್ಪಹೂನಗೆ
ಸುತ್ತ ದಳಗಳಲಿ ಸಿಂಗಾರವಾಗಿದೆ ನಲ್ಮುಂಜಾವಿಗೆ
ನಿತ್ಯ ಆಸ್ವಾದಕರಿಗೆ ಸುಲಲಿತ ಚಿತ್ತಾರವಾಗಿದೆ
ಓದುಗ ಮನಗಳಿಗೊಂದು ಕಾವ್ಯ ಮೂಡಿದೆ
ಕಾತುರದ ಅಭಿಮಾನಿಗಳತ್ತ ಓಡಿ ಬರುತಿದೆ
ಮುದದಲಿ ಕಣ್ಮನಗಳಿಗೆ ಉಲ್ಲಾಸ ತರುತಿದೆ
- ಲಲಿತಾ ಕೆ ಆಚಾರ್, ಬೆಂಗಳೂರು




















