ಹಸಿರ ನಡುವಿನ ಕೆರೆಯ ದಡದಲಿ
ದಿನದ ಮುಂಜಾವಿನ ಕಾಲು ನಡಿಗೆಯಲಿ
ಪರಿಸರವ ಆಸ್ವಾದಿಸುತ ಸಾಗುವ ಸಮಯದಲಿ
ಮುಂಗಾರಿನ ಗಾಳಿಗೆ ಉದುರಿದ ಹೂಕಡ್ಡಿಗಳಲಿ
ಅರಳಿರುವ ಸುಲಲಿತೆಯ ಕ್ರಿಯಾಶೀಲ ಚಿತ್ತಾರವು
ಖುಷಿಯಲಿ ಬರೆದಿಹ ಸರಳ ಕಾವ್ಯವು
ಶುಭ ಮುಂಜಾವಿನ ಶುಭದ ದಿನವು
ಹೇಳಲು ಬರುತಿರುವ ವಿಶ್ವ ಪರಿಸರ ದಿನದ ಶುಭಾಶಯವು
- ಲಲಿತಾ ಕೆ ಆಚಾರ್, ಬೆಂಗಳೂರು




















