
ಕನಕಗಿರಿ : ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸೂರ್ಯೋದಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕನಕಗಿರಿ ಮತ್ತು ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆ ಕನಕಗಿರಿ ಇವರ ಸಂಯೋಗದಲ್ಲಿ ಶಾಲಾ ಆವರಣ ಮತ್ತು ಶಾಲಾ ತರಗತಿಗಳ ಮುಂದುಗಡೆ ಸಸಿಯನ್ನು ನೆಡಿಸುವುದರ ಮೂಲಕ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಪರಿಸರದ ಕಾಳಜಿ ಮತ್ತು ಪರಿಸರ ಸಂರಕ್ಷಣೆ ಕುರಿತು ಮಾಹಿತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೀಲಕಂಠಗೌಡ ಪೊಲೀಸ್ ಪಾಟೀಲ್, ಸೂರ್ಯೋದಯ ಸೌಹಾರ್ದ ಸಹಕಾರಿ ನಿಯಮಿತ ಸಂಘ ಕನಕಗಿರಿ ಸಂಘದ ಅಧ್ಯಕ್ಷರಾದ ಶ್ರೀ ಕೆ ಬಸಲಿಂಗಸ್ವಾಮಿ, ಉಪಾಧ್ಯಕ್ಷರಾದ ಶ್ರೀ ನಾಗರಾಜ್ ಭೀಮನಗೌಡ ಪಾಟೀಲ್, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಕಾಶ್ ಗದ್ದಿ, ಸಂಸ್ಥೆಯ ಸರ್ವ ಸದಸ್ಯರು, ಶಾಲೆಯ ಮುದ್ದು ಮಕ್ಕಳು ಮತ್ತು ಎಲ್ಲಾ ಶಿಕ್ಷಕರ ಬಳಗದವರು ಈ ಉಪಸ್ಥಿತರಿದ್ದರು.




















