ಬಾಗಲಕೋಟೆ -ಮುಧೋಳ : ನೆಲಮೂಲ ಸಂಸ್ಕೃತಿಯನ್ನು ತಲ ತಲಾಂತರದಿಂದ ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಮುಖ್ಯಹಾಹಿನಿಗೆ ಬರಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಹೇಳಿದರು. ಸಮೀಪದ ಗದ್ದನಕೇರಿಯ ಸದ್ಗುರು ಲಡ್ಡು ಮುತ್ಯಾರ ಮಠದಲ್ಲಿ ಬಾಗಲಕೋಟೆಯ ಕನಾ೯ಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟವು ಆಯೋಜಿಸಿದ ವಿಶ್ವ ಸಂಗೀತ ದಿನಾಚರಣೆ ಸಂಭ್ರಮ-2026. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಸತ್ವವುಳ್ಳ ಜನಪದ ಕಲೆ. ಸಾಹಿತ್ಯ.ಸಂಗೀತದೊಂದಿಗೆ ಕಲಾವಿದರು ಬೆಳೆದು ಮುಂದಿನ ಪೀಳಿಗೆಗೆ ನೆರಳಾಗಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳು ಮಾತನಾಡಿ ಸವ೯ಕಲಾವಿದರ ಒಕ್ಕೂಟದಿಂದ ವಷ೯ವಿಡೀ ವಿಶೇಷ ಸಾಂಸ್ಕೃತಿಕ. ಧಾರ್ಮಿಕ. ಸಾಹಿತ್ಯಾತ್ಮಕ. ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದ ಅವರು ಕಲಾವಿದರ ಕುಂದು ಕೊರತೆಗಳ ಪರ ಧ್ವನಿ ಎತ್ತಲು ನಿರಂತರ ಅಭಿಯಾನ ಮುಂದುವರಿಸಲಾಗುವುದು ಎಂದರು.
ಒಕ್ಕೂಟದ ಗೌರವಾಧ್ಯಕ್ಷ ಚಿನ್ನಪ್ಪಗೌಡ ಗಿಡ್ಢಪ್ಪಗೋಳ ಮಾತನಾಡಿದರು.
ಮುರನಾಳದ ಮಳೆರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ತುಳಸಿಗಿರಿಯ ರಾಮಾನಂದ ಶ್ರೀಗಳು ಉಪಸ್ಥಿತರಿದ್ದರು.
ಮುಖಂಡ ಯಲ್ಲಪ್ಪ ಪೂಜಾರಿ ಕಾಯ೯ ನಿವ೯ಹಿಸಿದರು.
ಪ್ರ.ಕಾಯ೯ದಶಿ೯ ಪವಿತ್ರ ಜಕ್ಕಪ್ಪನವರ.ಉಪಾಧ್ಯಕ್ಷ ಶಂಕರೆಪ್ಪ ತಂಬಾಕದ ಸದಾಶಿವ ಅಗೋಜಿ.ರಾಮಣ್ಣ ಗಲಗಲಿ ಮುಂತಾದವರಿದ್ದರು.
ಸುಮಾರು 100 ತಂಡಗಳು ಜನಪದ ಸೇವೆಗೈದವು.
- ಕರುನಾಡ ಕಂದ ಸುದ್ದಿ




















