
ಕೂಡ್ಲಿಗಿ : ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೋಂದಾಯಿತ.
ತಾಲೂಕು ಘಟಕ ಕೂಡ್ಲಿಗಿ ವತಿಯಿಂದ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಕೂಡ್ಲಿಗಿ ತಾಲೂಕಿನಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು, ತಾಲೂಕು ಆಡಳಿತದ ವಿರುದ್ಧವಾಗಿ ದಿನಾಂಕ 08 ಜೂನ್ 2026 ರಂದು ನಡೆದ ಬೃಹತ್ ಪ್ರತಿಭಟನೆ ಹಾಗೂ 04 ಜೂನ್ 2026 ರಂದು ಬಡೇಲಡಕು ಗ್ರಾಮದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ವಿರುದ್ಧ ದೂರು ಕುರಿತಾಗಿ ಮಾನ್ಯ ಕೂಡ್ಲಿಗಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಇವರ ಮೂಲಕ ವಿಜಯನಗರ ಜಿಲ್ಲಾಧಿಕಾರಿಗೆ ಹಾಗೂ ಕರ್ನಾಟಕ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದು, ಈ ಅರ್ಜಿಯನ್ನು ಆಯಾ ಇಲಾಖೆಗೆ ವಿಲೇವಾರಿ ಮಾಡುವ ಬದಲಾಗಿ ತಮ್ಮಲ್ಲಿಯೇ ಇಟ್ಟುಕೊಂಡು ಕೂಡ್ಲಿಗಿ ತಾಲೂಕು ಆಡಳಿತ ಭಂಡತನ ಪ್ರದರ್ಶಿಸುತ್ತಾರೆ, ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವುದು. ಇನ್ನು ತಾಲೂಕಿನ ದಲಿತರಿಗೆ ನ್ಯಾಯ ಸಿಗುವುದಾದರೂ ಎಲ್ಲಿ…?!
ಇನ್ನು ಜನಸಾಮಾನ್ಯರ ಗತಿಯೇನು.?
ಸಾವಿರಾರು ಜನ ಪ್ರತಿಭಟನೆ ಮಾಡಿರುವುದಕ್ಕೆ ಬೆಲೆನೇ ಇಲ್ಲವೇ…? ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಎಸ್. ದುರುಗೇಶ್ ಕೂಡ್ಲಿಗಿ ,ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಲ್ ಪರಶುರಾಮ್, ತಾಲೂಕು ಸಂಚಾಲಕರಾದ ಬಡೆಲಡುಕು ದುರುಗೇಶ್, ಜಿಲ್ಲಾ ಸಮಿತಿಯ ಸದಸ್ಯರಾದ ಲೋಕಿಕೆರೆ ಕರಿಬಸಪ್ಪ, ಬಣವಿಕಲ್ ಚೌಡೇಶ್, ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್, ಕಾನಾಮಡುಗು ಎನ್ ಪಕೀರಪ್ಪ, ಕೂಡ್ಲಿಗಿ ಮಹೇಶ್. ಕೆ ಮೂಗಪ್ಪ.ಅಜಯ್ ಕುಮಾರ್ ಹೊಸಳ್ಳಿ, ಕರಿಬಸಪ್ಪ ಮಾಲೆಹಳ್ಳಿ, ಮಂಜಪ್ಪ ಐಗಳ, ಮಲ್ಲಾಪುರ ರಮೇಶ್ ಕೂಡ್ಲಿಗಿ ನಗರ ಸಂಚಾಲಕ ನಾಗರಾಜ್ ಹೊಸಹಳ್ಳಿ, ಹೋಬಳಿ ಸಂಚಾಲಕ ಮಲ್ಲೇಶ್ ಲೋಕಿಕೆರೆ, ತಿಪ್ಪೇಸ್ವಾಮಿ, ಕುಮತಿ ಯಲ್ಲಪ್ಪ ಸೇರಿದಂತೆ ಮತ್ತು ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.




















