ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೇಕ್ ಬಿಡಿ ಗಿಡ ನೆಡಿ : ಮೊದಲ ಪ್ರತಿಕ್ರಿಯೆ

ಭಾರತೀಯರು ಸಂಸ್ಕಾರದ ಆದಿಯಲ್ಲಿ ಬೆಳೆದವರು ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯಗಳಲ್ಲಿ ವಿಭಿನ್ನ ಹಾಗೂ ನವೀನ.
ಇಂತಹ ಸಂಸ್ಕೃತಿಯನ್ನು ಜಗತ್ತಿನಲ್ಲಿ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಇಂದು ಅನೇಕ ದೇಶಗಳು ನಮ್ಮ ಸಂಸ್ಕೃತಿಗೆ ಮಾರು ಹೋಗಿದ್ದಾರೆ ಎನ್ನುವುದನ್ನು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಇಂತಹ ಅಮೃತ ಸಂಸ್ಕಾರದ ನಡುವೆ ಬ್ರಿಟಿಷರು ಕೆಲವೊಂದು ಆಚಾರಗಳನ್ನು ನಮ್ಮಲ್ಲಿ ತುಂಬಿ ಹೋಗಿದ್ದಾರೆ ಅವುಗಳಲ್ಲಿ ಈ ಕೇಕ್ ಕತ್ತರಿಸುವುದು ಕೂಡ ಒಂದು. ಇದರ ಹಿಂದೆ ದೊಡ್ಡ ವ್ಯವಹಾರ ಇದ್ದರೂ ನಾವು ಯೋಚನೆ ಮಾಡುವ ಗುಂಗಿಗೆ ಹೋಗಿಲ್ಲ. ಪ್ರತಿದಿನ ಇದು ಹೆಮ್ಮರವಾಗಿ ಬೆಳೆಯುತ್ತಿದ್ದು ಒಂದಲ್ಲ ಒಂದು ವಿಶೇಷ ದಿನವೆಂದು ಆಚರಣೆ ಮಾಡಿಕೊಳ್ಳುವ ಹುಚ್ಚಿಗೆ ಬಿದ್ದು ಬಿಟ್ಟಿದ್ದೇವೆ. ಪ್ರತಿದಿನ ಹುಟ್ಟುಹಬ್ಬ, ವಾರ್ಷಿಕೋತ್ಸವ, ಆ ಸಮಾರಂಭ, ಈ ಸಮಾರಂಭ, ಅಪ್ಪನ ದಿನ, ಅಮ್ಮನ ದಿನ, ಅಣ್ಣನ ದಿನ, ತಂಗಿಯ ದಿನ, ಪ್ರೇಮಿಯ ದಿನ, ಮಾಜಿ ದಿನ, ಹಾಲಿ ದಿನ ಹೀಗೆ ನೂರೆಂಟು ಹೆಸರು ಹೇಳಿಕೊಂಡು ಒಂದಲ್ಲ ಒಂದು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಇದಾವುದು ಇಲ್ಲದಿದ್ದರೂ ತಂದೆ ತಾಯಿ ಗುರು ಹಿರಿಯರ ಮೇಲೆ ಅಪಾರ ಗೌರವವಿತ್ತು. ಆದರೆ ಅಂತಹ ಗೌರವವನ್ನು ಇಂದು ಭೂತಕನ್ನಡಿಯಲ್ಲಿ ಹುಡುಕಬೇಕು. ಎಲ್ಲೆಡೆ ವೃದ್ದಾಶ್ರಮಗಳು ನಕ್ಕು ಜಗತ್ತನ್ನು ಅಣುಕಿಸುವ ಸ್ಥಿತಿಯಲ್ಲಿ ನಾವು ಇರುತ್ತಿರಲಿಲ್ಲ ಎನಿಸುತ್ತದೆ. ಇಂದು ಚಿಕ್ಕ ಕುಟುಂಬ ಶ್ರೇಷ್ಠ ಎಂದುಕೊಂಡು ಅವರನೆಲ್ಲ ಹೊರಗೆ ದೂಡಿ ಔಪಚಾರಿಕವಾಗಿ ಬೇರೆಯವರಿಗೆ ತಿಳಿಯಲಿ ಎಂದು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಅಪ್ಪ ಐ ಲವ್ ಯು, ಅಮ್ಮ ಐ ಲವ್ ಯು, ಅಣ್ಣ, ತಂಗಿ, ಪ್ರೇಮಿ ಹೀಗೆ ಎಲ್ಲವನ್ನು ಹಾಕಿ ಶ್ರೀಮಂತಿಕೆ ಪರಂಪರೆ ಎಂದು ಬಿಂಬಿಸ ಹೊರಟಿದ್ದೇವೆ. ಇವೆಲ್ಲವನ್ನೂ ಬಿಟ್ಟು ಸಮಾಜಕ್ಕೆ, ಪರಿಸರಕ್ಕೆ ಮತ್ತು ಸಂಸ್ಕೃತಿಗೆ ಪೂರಕವಾಗಿ ಬದುಕೋಣ ಎನ್ನುವ ಹಂಬಲ ಹೊಂದಿ ಸುಂಕದಗದ್ದೆ ಶಾಲೆಯಲ್ಲಿ ಕೇಕ್ ಬಿಡಿ ಗಿಡ ನೆಡಿ ಎನ್ನುವ ಅಭಿಯಾನ ಪ್ರಾರಂಭವಾಗಿದೆ. ಬಹುಬೇಗನೆ ಎಲ್ಲರಿಂದ ಇಂತಹ ಆಚರಣೆಗಳನ್ನು ಬಿಡಿಸುವುದು ಅಷ್ಟು ಸುಲಭವು ಅಲ್ಲ. ಇದಕ್ಕೆ ಸೂಕ್ತ ಉತ್ತರ ಏನು ಎನ್ನುವುದು ಮುಂದೆ ಹುಡುಕಬೇಕು ಅಷ್ಟೇ. ಅದು ಏನೇ ಇರಲಿ ನಾವಂತೂ ಇಂತಹ ಆಚರಣೆಗಳಿಂದ ಬಹುದೂರ. ಆಚರಣೆ ಮಾಡಿಕೊಳ್ಳಲೇಬೇಕು ಎನ್ನುವವರಿಗೆ ನಮ್ಮ ಶಾಲೆಯಲ್ಲಿ ಒಂದು ಪರ್ಯಾಯ ಮಾರ್ಗವಿದೆ. ನಿಮ್ಮ ಹಾಗೂ ನಿಮ್ಮ ಸಂಬಂಧಿಕರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳವ ಮನಸ್ಸು ಇದ್ದಲ್ಲಿ ನಮ್ಮ ಶಾಲೆಗೆ ಬನ್ನಿ. ಆದರೆ ಇಲ್ಲಿ ಆಚರಣೆ ಇರುವುದಿಲ್ಲ, ಯಾವುದೇ ಕೇಕ್ ಕತ್ತರಿಸುವ, ಅದ್ದೂರಿಯಾದ ಕಾರ್ಯಕ್ರಮವಿಲ್ಲ. ನೀವು ಕೇಕ್ ಅಥವಾ ಜಂಕ್ ಫುಡ್ ಗೆ ಖರ್ಚು ಮಾಡುವ ಹಣದಲ್ಲಿ ನಮ್ಮ ಶಾಲೆಯ ಆವರಣದಲ್ಲಿ ಗಿಡ ನೆಡಬಹುದು, ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಬಹುದು, ಸರ್ಕಾರಿ ಶಾಲೆಗೊಂದು ಶಾಶ್ವತ ಆಸ್ತಿ ಮಾಡಬಹುದು, ದತ್ತಿನಿಧಿಗಳನ್ನು ಆರಂಭ ಮಾಡಬಹುದು, ಮಕ್ಕಳಿಗೆ ಸಿಹಿ ಭೋಜನ ವ್ಯವಸ್ಥೆ ಮಾಡಬಹುದು ಹೀಗೆ ತಮಗನಿಸಿದ ಯಾವುದಾದರೂ ಒಂದು ಕಾರ್ಯ ಮಾಡಬಹುದು. ಕೇಕ್, ಜಂಕ್ ಫುಡ್, ಚಾಕಲೇಟ್ ಮುಂತಾದ ಅಪಥ್ಯ ಆಹಾರಗಳಿಗೆ ಸಂಪೂರ್ಣ ನಿಷೇಧವಿದೆ.ಈ ರೀತಿ ಆಲೋಚನೆ ಮಾಡಿ ಒಂದು ಜಾಹೀರಾತು ಹಂಚಿಕೊಳ್ಳಲಾಯಿತು. ಈ ಜಾಹೀರಾತನ್ನು ಕೊಪ್ಪದ ಹುಡ್ಕೋದವರು ತನ್ನ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ಇವರ ಸ್ಟೇಟಸ್ ನೋಡಿದ ಕರ್ಕಿಕೊಂಡ ಎಸ್ಟೇಟ್ ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವ ಬಸರಿಕಟ್ಟೆ ಪ್ರದೀಪ್ ರವರಿಗೆ ತಾನು ಕೂಡ ಮಗಳ ಹುಟ್ಟುಹಬ್ಬವನ್ನು ಈ ಅಭಿಯಾನದ ಉದ್ದೇಶದಲ್ಲಿ ಮಾಡಬೇಕು ಎಂದುಕೊಂಡು *ತನ್ನ ಮಗಳ ಹುಟ್ಟುಹಬ್ಬವನ್ನು ಸುಂಕದಗದ್ದೆ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡುವ ಮೂಲಕ ಇಂದು ಸರಳವಾಗಿ ಆಚರಣೆ ಮಾಡಿಕೊಂಡರು. ಈ ಅಭಿಯಾನಕ್ಕೆ ಕೈ ಜೋಡಿಸಿದ ಹುಡ್ಕೋದವರಿಗೆ ಅಕ್ಷರದ ಅರ್ಪಣೆ ಮಾಡಿ ಇನ್ನೂ ಮುಂದೆ ಕೂಡ ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎನ್ನುವ ಆಶಯ.

ಒಟ್ಟಾರೆ ಸಾರಾಂಶ ಹುಟ್ಟುಹಬ್ಬ ಎಂದು ಯಾವುದೋ ವಿದೇಶಿ ಆಚರಣೆ ಮಾಡುವುದಕ್ಕಿಂತ ನಮ್ಮ ನೆಲದ ಸಂಸ್ಕೃತಿ ಆಚಾರ ವಿಚಾರ ಗೌರವಿಸಿಕೊಂಡು ವೃದ್ದಾಶ್ರಮಗಳು ಬೆಳೆಯದಂತೆ ಚಿವುಟಿ ಸಂಸ್ಕಾರದ ಹಾದಿಯಲ್ಲಿ ಬೆಳೆಯೋಣ.

ಬದಲಾವಣೆಗೆ ಒಗ್ಗುವುದು ಕಷ್ಟವಾದರೆ ಕೇಕ್ ಬಿಟ್ಟು ಗಿಡ ಹಿಡಿದು ನಮ್ಮ ಶಾಲೆಗೆ ಬನ್ನಿ…

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!