
ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ 100 ಅಡಿ ರಸ್ತೆಯ ಬಂಟರ ಭವನದಲ್ಲಿ ಶುಕ್ರವಾರದಿಂದ ಹಲಸಿನ ಮೇಳ ಜರುಗುತ್ತಿದ್ದು ಅತ್ಯಂತ ವರ್ಣ ರಂಜಿತ ವಾತಾವರಣದಿಂದ ಕಂಗೊಳಿಸುತ್ತಿದೆ.
ಹಲಸಿನ ವಿವಿಧ ಉತ್ಪನ್ನಗಳಾದ ಹಲಸಿನ ಹಣ್ಣು ಹಲ್ವಾ, ಹಪ್ಪಳ, ಹಣ್ಣಿನ ಹಿಟ್ಟು, ಹೋಳಿಗೆ, ದೋಸೆ, ಉಂಡಳ ಕಾಳು, ಚಿಪ್ಸ್ ಸೇರಿದಂತೆ ವಿವಿಧ ತಳಿಯ ಹಲಸಿನ ಹಣ್ಣುಗಳ ಮಾರಾಟದಿಂದ ಮೇಳ ಕಂಗೊಳಿಸುತ್ತಿದೆ.
ಚನ್ನಪಟ್ಟಣದ ಗೊಂಬೆಗಳು, ವಿವಿಧ ಅಲಂಕಾರಿಕ ಆಭರಣಗಳು, ಬಟ್ಟೆಗಳು, ತಿಂಡಿ ತಿನಿಸುಗಳು, ಎಲೆಕ್ಟ್ರಾನಿಕ್ ಉಪಕರಣಗಳು ಇತ್ಯಾದಿ ಮಳಿಗೆಗಳು ಕೂಡಾ ಹಲಸು ಮೇಳದ ಜೊತೆಗೆ ಕಂಗೊಳಿಸುತ್ತಿದ್ದು ಬಹಳ ಜನರ ಆಕರ್ಷಣೆ ಕೇಂದ್ರವಾಗಿ ಮೇಳೈಸಿ ಇದೇ ಬರುವ ಭಾನುವಾರದ ತನಕ ವೀಕ್ಷಣೆಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















