ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಮ್ಮಿಗನೂರು ಗ್ರಾಮೀಣ ಪ್ರದೇಶದಲ್ಲಿ ಜನಮನ ಸೆಳದ ಸುಗಮ ಸಂಗೀತ ಕಾರ್ಯಕ್ರಮ- 2026

ಬಳ್ಳಾರಿ / ಕಂಪ್ಲಿ :ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಡಾ|| ಅಬ್ದುಲ್ ಕಲಾಂ ಎಸ್. ಪಿ ಚಾರಿಟೇಬಲ್ ಫೌಂಡೇಶನ್ (ರಿ.) ಎಮ್ಮಿಗನೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಗದೊಂದಿಗೆ ಗುರುವಾರ ಸಂಜೆ ಸುಗಮ ಸಂಗೀತ ಕಾರ್ಯಕ್ರಮವನ್ನು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇಂದಿನ ಮಕ್ಕಳಿಗೆ ತಂದೆ ತಾಯಿ ಮತ್ತು ಗುರುಗಳು ಉತ್ತಮವಾದ ಮಾರ್ಗದರ್ಶನ ನೀಡಬೇಕು. ಇಂದಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಪೋನ್ ಬಳಕೆ ಅತಿ ಹೆಚ್ಚಾಗಿ ಪರಿಣಾಮ ಬೀರಿದೆ ಅದನ್ನು ತಪ್ಪಿಸುವ ಕೆಲಸ ಮನೆಯಲ್ಲಿ ತಾಯಿ ಮೊದಲು ಗುರುಗಳು ಎಂದು ಕರೆಯುತ್ತಾರೆ ಆ ತಾಯಿ ಮಕ್ಕಳಿಗೆ ಆಟದ ಮೇಲೆ ಪರಿಣಾಮ ಬೀರುವಂತೆ ಪ್ರೇರಿಸಬೇಕು ಮಕ್ಕಳಿಗೆ ತಂದೆ ಒಳ್ಳೆಯ ಕಥೆರನಾಟಕ, ಹಾಡುಗಳು ಹೇಳುವುದರ ಮುಖಾಂತರ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಶಾಲಾ ಹಂತದಲ್ಲಿ ಮಕ್ಕಳಿಗೆ ಸತ್ಯಾಂಶ ಬಗ್ಗೆ ಅರಿವು ಮೂಡಿಸುವ ನಾಟಕ,ಸಂಗೀತ, ನೃತ್ಯ ಕೈಗೊಳ್ಳಬೇಕು ಶಾಲೆಗಳಲ್ಲಿ ರಂಗಭೂಮಿ ಶಿಕ್ಷಕರ ನೇಮಕಾತಿ ಪ್ರಾರಂಭವಾಗಬೇಕೆಂದು ಸಸಿಗೆ ನೀರು ಎರೆಯುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ ರಂಗನಿರ್ದೇಶಕರಾದ ಮಾವಿನಹಳ್ಳಿಯ ಕುರುಬರ ಹೇಮೇಶ್ವರ ಉದ್ಘಾಟಕರ ನುಡಿಯನ್ನು ಪ್ರಸ್ತಾಪಿಸಿದರು.

ಇಂದಿನ ತಲೆ ಮಾರಿನ ಯುವ ಪೀಳಿಗೆಗೆ ಹಳೆಯ ರಂಗಭೂಮಿ ಕಲಾವಿದರನ್ನು ಗುರುತಿಸಿ ಮಕ್ಕಳಿಗೆ ಪರಿಚಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ ಇವರು ಮಾಡುವ ಸಹಕಾರದಿಂದ ಕಲೆ,ಸಾಹಿತ್ಯ ಮತ್ತು ರಂಗಭೂಮಿ ಕಲೆಗಳನ್ನು ಹೊರ ತರಲು ಸಾಧ್ಯವಾಗುತ್ತದೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಕಲಾವಿದರು ಎಮ್ಮಿಗನೂರು ಅಧ್ಯಕ್ಷತೆ ನುಡಿಯನ್ನು ಮಾತಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ : ಸುಗಮ ಸಂಗೀತ : ರಾಜ ಎಮ್ಮಿಗನೂರು ಮತ್ತು ತಂಡದವರು ಶಿವ, ಶಿವೆ, ಶಿಶುನಾಳ ಶರೀಫರ ತತ್ವಪದಗಳು ಸೇರಿದಂತೆ ಹಳ್ಳಿ ಸೊಬಗಿನ ಸುಗಮ ಸಂಗೀತವನ್ನು ಹಾಡಿ ಜನಮನ ಗೆದ್ದರು.

ಈ ಸಂದರ್ಭದಲ್ಲಿ ಶಿಕ್ಷಕರ ಭೀಮೇಶ್, ರಮೇಶ, ಅಡಿಗೆ ಸಹಾಯಕರು ವಿಜಯ್ ,ರಂಗ ನಿರ್ದೇಶಕರು ಕುರುಬರ ಹೇಮೇಶ್ವರ. ಮಾವಿನಹಳ್ಳಿ ಸಂಗೀತಗಾರರಾದ ಶ್ರೀಮತಿ ಸಂಗೀತ ಗಂಗಾವತಿ, ತಬಲಾ ವಾದಕರಾದ ರಾಘವೇಂದ್ರ ಗಂಗಾವತಿ, ಕ್ಯಾಶಿಯೋನ ರಾಮ ಕಂಪ್ಲಿ, ಊರಿನ ಗುರು ಹಿರಿಯರ ಮತ್ತು ರೈತ ಬಾಂಧವರು, ಹಾಗೂ ಸಾರ್ವಜನಿಕರು,ಡಾ.ಅಬ್ದುಲ್ ಕಲಾಂ ಎಸ್. ಪಿ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷರು ಶ್ರೀಮತಿ ಬಿ.ಸಬೀನ್ ಮತ್ತು ಕಾರ್ಯದರ್ಶಿ ಶ್ರೀ ಹೆಚ್ ಪೀರಾವಲಿ ಮತ್ತು ಸರ್ವಸದಸ್ಯರು ಭಾಗವಹಿಸಿದ್ದರು.
ನಿರೂಪಣೆ ಮತ್ತು ಸ್ವಾಗತ ರಮೇಶ ಎಮ್ಮಿಗನೂರು ನೆರವೇರಿಸಿಕೊಟ್ಟರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!