ಹಸಿರ ಕಡ್ಡಿಯ ತುದಿಯಲಿ ಕೆಂಪಿನಾ ಗೋಲಿಗಳು
ಸಿಹಿತಿಂಡಿಗಳ ಸಿಂಗಾರಕೆ ಏರಿಸುವ ಆಕರ್ಷಣೆಗಳು
ಉದರದಲಿ ಅಡಗಿರುವ ಬೀಜದಾ ಬೊಟ್ಟುಗಳು
ಅದುವೆ ಹುಳಿಮಿಶ್ರ ಸಿಹಿ ಸ್ವಾದದ ಚೆರ್ರಿ ಹಣ್ಣುಗಳು
ಜೊತೆಯಲಿ ಸೇರಿವೆ ಕೇಸರಿ ಬಿಳಿ ನಿತ್ಯಪುಷ್ಪಗಳು
ಗರಿಗೆದರಿವೆ ಪುಟ್ಟ ಪುಟ್ಟ ತುಂಬೆಯಾ ಹೂಗಳು
ಕ್ರಿಯಾಶೀಲತೆಯಲಿ ಮೂಡಿರುವ ವಿನ್ಯಾಸಗಳು
ಉದಯರಾಗದ ಜೊತೆಗಿದುವೆ ಶುಭ ನಮನಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















