ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾ ವೈರಾಗ್ಯ ಮೂರ್ತಿ ಭಕ್ತಿ ನಿಷ್ಠ ಶರಣ ಹಡಪದ ಅಪ್ಪಣ್ಣ

ಅಂಗ ಲಿಂಗಾಯಿತೆಂಬರಿ ಲಿಂಗ ಅಂಗವಾಯಿತೆಂಬಿರಿ
ಅಂಗ ಲಿಂಗ ಸಂಬಂಧ ಎಲ್ಲರಿಗೂ ಎಂತಾಯಿತ್ತು ಹೇಳಿರಣ್ಣ
ಅಂಗ ಲಿಂಗ ಸಂಬಂಧವಾದರೆ ಗುರುವಿನಲ್ಲಿ ಗುಡ್ಡನಾಗಿರಬೇಕು
ಲಿಂಗದಲ್ಲಿ ನಿಷ್ಠನಾಗಿರಬೇಕು
ಜಂಗಮದಲ್ಲಿ ಅವಧಾನಿಯಾಗಿರಬೇಕು
ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರ
ಬಸವ ಪ್ರಿಯ ಕೂಡಲ ಚನ್ನಬಸವಣ್ಣ

ಇಂತಹ 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣ ಬಸವ ಕಲ್ಯಾಣದಲ್ಲಿ ಶರಣರಿಗೆ ತಾಂಬೂಲ ನೀಡುವ ಕಾಯಕವನ್ನು ಮಾಡುತ್ತಲೇ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ವಿಶ್ವದ ಮೊದಲ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಗಳಾಗಿ ಸಮಾಜದಲ್ಲಿಯ ಮೂಢನಂಬಿಕೆ ಮೂಢಾಚಾರಗಳ ವಿರುದ್ಧ ಧ್ವನಿ ಎತ್ತಿದ ಮಹಾಶರಣ ಹಡಪದ ಅಪ್ಪಣ್ಣ ಬೆಳಗ್ಗೆ ಹಡಪದ ಅಪ್ಪಣ್ಣನ ಮುಖ ನೋಡಿದರೆ ಅಪಶಕುನ ಎಂದು ಎಲ್ಲರೂ ಹೇಳುತ್ತಿದ್ದರು ಅದಕ್ಕಾಗಿಯೇ ಜಗಜ್ಯೋತಿ ಬಸವಣ್ಣನವರು ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಗಳಾಗಿ ನೇಮಿಸಿಕೊಂಡು ಮುಂಜಾನೆ ಎದ್ದ ತಕ್ಷಣವೇ ಹಡಪದ ಅಪ್ಪಣ್ಣನವರನ್ನೇ ನೋಡಿ ಕಾಯಕ ನಿಷ್ಠರಾಗುತ್ತಿದ್ದರು ಅಲ್ಲದೆ ಕಲ್ಯಾಣದಲ್ಲಿ ಬಸವಣ್ಣನವರನ್ನು ಭೇಟಿಯಾಗಲು ಬರುವ ಶರಣರಿಗೆ ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕು ಎಂದು ಬಸವಣ್ಣನವರು ಸಾರಿದ್ದರು ಕಾರಣ ಇಷ್ಟೇ ಅವರ ಮುಖ ನೋಡಿದರೆ ಕೆಟ್ಟದ್ದಾಗುತ್ತದೆ ಬೆಕ್ಕು ಅಡ್ಡ ಹೋದರೆ ಒಳಿತಾಗುವುದಿಲ್ಲ ಎನ್ನುವ ಮೂಢಾಚರಗಳ ವಿರುದ್ಧ ನಾವಿದ್ದೇವೆ ಎಂದು 12ನೆಯ ಶತಮಾನದ ಎಲ್ಲ ಶರಣರು ತಮ್ಮ ಕಾಯಕದ ಮೂಲಕ ಹಾಗೂ ವಚನಗಳನ್ನು ರಚಿಸುವುದರ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ ಅಂತಹ ಶರಣರಲ್ಲಿ ಬಸವಣ್ಣನವರ ಬಲಗೈ ಬಂಟನೆಂದೇ ಗುರುತಿಸಿಕೊಂಡ ಹಡಪದ ಅಪ್ಪಣ್ಣ.
ಹಡಪದ ಅಪ್ಪಣ್ಣನವರು ಪ್ರಸ್ತುತ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದರು ಇವರ ತಂದೆ ಚೆನ್ನವೀರಪ್ಪ ಮತ್ತು ತಾಯಿ ದೇವಕ್ಕಮ್ಮ ಇವರ ಪತ್ನಿ ಲಿಂಗಮ್ಮನವರೂ ಕೂಡ ಮಹಾ ಶರಣೆ ವಚನಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ನೀಲಾಂಬಿಕೆ ನಾಗಲಾಂಬಿಕೆ ಮಾತೆಯರಿಗೆ ಲಿಂಗಮ್ಮನವರು ಅತ್ಯಾಪ್ತರಾಗಿದ್ದರು.
ಸತಿಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ ಹಡಪದ ಅಪ್ಪಣ್ಣ ಶರಣಪಥಿಗಳ ಭಕ್ತಿ ಬಸವಣ್ಣನವರಿಗೆ ತುಂಬಾ ಇಷ್ಟವಾಗುತ್ತಿತ್ತು
ಅಪ್ಪಣ್ಣ ಶರಣರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ಬಸವಪ್ರಿಯ ಕೂಡಲ ಚನ್ನಬಸವಣ್ಣ ಎಂಬ ಅಂಕಿತನಾಮದೊಂದಿಗೆ ರಚಿಸಿದ್ದು ಇವು ಬೆಳಗಿನ ವಚನಗಳು ಎಂದು ಹೆಸರಾಗಿವೆ ಎಲ್ಲಾ ವಚನಗಳಲ್ಲಿ ಷಟಸ್ಥಲ ತತ್ವಗಳು ಕಾಯಕ ನಿಷ್ಠೆ ಹಾಗೂ ವೈರಾಗ್ಯವನ್ನು ಬಿಂಬಿಸುತ್ತವೆ
ಹಡಪದ ಎಂದರೆ ಕ್ಷೌರಿಕ ಎಂಬ ವೃತ್ತಿ ಎಂದು ಎಲ್ಲರೂ ಭಾವಿಸಿಕೊಳ್ಳುತ್ತಾರೆ ಆದರೆ ಹಡಪದ ಎಂದರೆ ಎಲೆ ಅಥವಾ ತಾಂಬೂಲ ಎಂದರ್ಥವಿದೆ ಹಾಗಾಗಿ ಹಡಪದ ಅಪ್ಪಣ್ಣ ಶರಣ್ ದಂಪತಿಗಳು 12ನೇ ಶತಮಾನದ ಎಲ್ಲಾ ಶರಣರಿಗೆ ತಾಂಬೂಲವನ್ನು ಕೊಡುವ ಕಾಯಕದಲ್ಲಿ ನಿರತರಾಗಿದ್ದರು ಹೀಗಾಗಿ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಎಲ್ಲ ಶರಣರು ಹಡಪದ ಅಪ್ಪಣ್ಣನವರನ್ನು ನಿಜ ಸುಖಿ ಅಪ್ಪಣ್ಣ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು.
ಕಲ್ಯಾಣದಲ್ಲಿ ಕ್ರಾಂತಿಯಾದ ನಂತರ ಹಡಪದ ಅಪ್ಪಣ್ಣ ದಂಪತಿಗಳು ವಿಜಯಪುರ ಜಿಲ್ಲೆಯ ತಂಗಡಗಿ ಪ್ರದೇಶಕ್ಕೆ ತೆರಳಿ ಅಲ್ಲಿಯೇ ಲಿಂಗೈಕರಾದರು ಎಂಬುದು ತಿಳಿದು ಬರುತ್ತದೆ, ತಂಗಡಗಿಯಲ್ಲಿ ಈಗಲೂ ಕೂಡ ಅವರ ಐತಿಹಾಸಿಕ ಸಮಾಧಿಯನ್ನು ನಾವು ಕಾಣಬಹುದು

  • ಅಂದಾನಯ್ಯ ವಸ್ತ್ರದ ಬಾಗಲಕೋಟೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!