ಬಳ್ಳಾರಿ / ಕಂಪ್ಲಿ : ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಗಳು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದ ಗೆಳೆಯರ ಬಳಗವು ಕಂಪ್ಲಿ ಕೋಟೆಯ ಶ್ರೀ ಹೊಳೆ ಆಂಜಿನೇಯ ದೇವಸ್ಥಾನದ ಆವರಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ, ಪೂರ್ಣಾಹುತಿ ಮತ್ತು ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಶ್ರದ್ಧೆ,ಭಕ್ತಿ,ಸಡಗರ ಸಂಭ್ರಮಗಳಿಂದ ನೆರವೇರಿಸಿದರು.
ಕಂಪ್ಲಿ-ಕೋಟೆಯ ಶ್ರೀ ಹೊಳೆ ಆಂಜಿನೇಯ ದೇವಸ್ಥಾನದ ಆವರಣದಲ್ಲಿ ಗ್ರಾಮ ಪುರೋಹಿತರಾದ ಜೆ.ನಾಗರಾಜಾಚಾರ್ ಮತ್ತು ಸಂಗಡಿಗರಿಂದ ವರ್ಷವೃಷ್ಡಿಗಾಗಿ,ವರ್ಣಪ್ದತ್ಯರ್ಥ ಆದಿತ್ಯಾದಿ,ಬ್ರಹ್ಮಾದಿ ಮಂಡಲ ಪರ್ಜನ್ಯ ಹೋಮ ಮತ್ತು ಪೂರ್ಣಾಹುತಿ ಕಾರ್ಯಕ್ರಮಗಳು ಜರುಗಿದವು. ನಂತರ ಗಂಗಾವತಿಯ ವಿಜಯಧ್ವಜ ಮಠದ ಪಂಡಿತ ವಾಗೀಶಾಚಾರ್ಯ ಇವರಿಂದ ಮಹಾಭಾರತದಲ್ಲಿ ನಡೆದ ವಿರಾಟ ಪರ್ವ ಅಧ್ಯಾತ್ಮಿಕ ಪ್ರವಚ ಕಾರ್ಯಕ್ರಮ ಜರುಗಿತು.
ನಂತರ ಆಗಮಿಸಿದ್ದ ಸಕಲ ಸದ್ಭಕ್ತರು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊನೆಯಲ್ಲಿ ನರೆದಿದ್ದ ಸಕಲ ಸದ್ಙಕ್ತರಿಗೂ ತೀರ್ಥ, ಪ್ರಸಾದ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ಕಂಪ್ಲಿ ಮತ್ತು ಕೋಟೆಯ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















