
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬುಕ್ಕಾಪಟ್ಟಣ ನೆಲೆಸಿರುವ ಶ್ರೀ ದೊಡ್ಡಮ್ಮ ದೇವಿಯು ಈ ಭಾಗದ ಪ್ರಮುಖ ಮತ್ತು ಪೂಜಾನೀಯ ಗ್ರಾಮ ದೇವತೆಯಾಗಿದ್ದಾರೆ.
ದೊಡ್ಡಮ್ಮ ದೇವಸ್ಥಾನವು ಈ ಭಾಗದ ದೇವತೆಯಾಗಿ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ಥಳೀಯರ ನಂಬಿಕೆಯ ಪ್ರಕಾರ ಈ ದೇವಿಯು ಕೊರಟಗೆರೆ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಒಳಿತನ್ನು ಮಾಡುವ ರೋಗರುಜಿನಗಳನ್ನು ದೂರವಿಡುವ ಮತ್ತು ಸಮೃದ್ಧಿಯನ್ನು ಕರುಣಿಸುವ ದೇವತೆಯಾಗಿದ್ದಾಳೆ.
ಈ ಕ್ಷೇತ್ರಕ್ಕೆ ಜಾತ್ರಾ ಸಮಯದಲ್ಲಿ ಕುಟುಂಬ ಸಮೇತ ಬಂದಿದ್ದ ಪಿಎನ್ ಕೃಷ್ಣಮೂರ್ತಿ ಅವರು ಅಲ್ಲಿ ನೆರೆದಿದ್ದ ಸುತ್ತು ಮುತ್ತಲಿನ ಗ್ರಾಮಸ್ಥರು ಭಕ್ತರು ಕಂಡು ಅಲ್ಲಿನ ಅನ್ನ ದಾಸೋಹ ಮಾಡುವ ಜಾಗದ ಪರಿಸ್ಥಿತಿಯನ್ನು ನೋಡಿ ನಾನು ಇಲ್ಲಿ ಒಂದು ದಾಸೋಹ ಭವನವನ್ನು ಮಾಡಿಸುವುದಾಗಿ ಹೇಳಿದ್ದರು.
ಇಂದು ಶುಭ ಸೋಮವಾರ ದಿ. 6/7/2026 ರಂದು ಬುಕ್ಕಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಗ್ರಾಮಸ್ಥರ ಮನವಿಯಂತೆ ದೇವಾಲಯಕ್ಕೆ ಧನ ಸಹಾಯ ಮಾಡುವುದಾಗಿ ತಿಳಿಸಿದರು. ಗ್ರಾಮದ ಗ್ರಾಮ ದೇವತೆ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ , ಅವರು ಕೊಟ್ಟ ಮಾತಿನಂತೆ ಇಂದು ಅನ್ನದಾಸೋಹ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ಮಾಡಿದರು. 103×75 ಅಡಿಗಳಲ್ಲಿ ಅನ್ನದಾಸೋಹ ಶಾಲೆಯನ್ನು ಯಾವುದೇ ಜಾತಿಭೇದವಲ್ಲದೆ ಎಲ್ಲ ಸದ್ಭಕ್ತರಿಗೂ ಅನುಕೂಲವಾಗಲೆಂದು ತಮ್ಮ ನಿಸ್ವಾರ್ಥ ಸೇವೆಯನ್ನು ಸಾಕ್ಷಿಯಾಗುವಂತೆ ಕೆಲಸ ಪ್ರಾರಂಭಿಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ಪಕ್ಕದ ಗ್ರಾಮವಾದ ಗಟ್ಲಹಳ್ಳಿಗೆ ಭೇಟಿ ನೀಡಿ ದೊಡ್ಡಮ್ಮ ತಾಯಿಯ ರಥ ನಿಲ್ಲಿಸಲು ಒಂದು ಗೋಪುರದ ಶೆಡ್ ನಿರ್ಮಾಣಕ್ಕೆ ₹ 1 ಲಕ್ಷ ನಗದು ನೀಡುವುದಾಗಿ ತಿಳಿಸಿದರು.
ಅವರ ಸೇವೆಯನ್ನು ನೆನೆದು ಗ್ರಾಮಸ್ಥರು ಯುವಕರು ಅನೇಕ ಮುಖಂಡರುಗಳು ನಿಮ್ಮ ಸಮಾಜಸೇವೆಯನ್ನು ಕಂಡು ನಮಗೆಲ್ಲ ಸಂತೋಷವಾಗಿದೆ ನಿಮ್ಮ ಸೇವೆಗೆ ನಾವು ಸದಾ ಸಿದ್ದ ಮುಂದೆ ಚುನಾವಣೆಯಲ್ಲಿ ನಿಮ್ಮ ಜೊತೆ ನಾವು ಇರುವುದಾಗಿ ಆತ್ಮವಿಶ್ವಾಸದಿಂದ ಪಿ ಎನ್ ಕೆ ಅವರಿಗೆ ಬುಕ್ಕಪಟ್ನ ಗ್ರಾಮಸ್ಥರು ಭರವಸೆ ಮತ್ತು ಅಭಿನಂದನೆಯನ್ನು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ ಎನ್ ಕೆ ಅವರು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಇಂದು ನಾವು ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ಬಡವರಿಗಾಗಿ ಅನುಕೂಲವಾಗಲೆಂದು ಆರು ಹೋಬಳಿಗಳಲ್ಲಿ ಸಮುದಾಯ ಭವನ ನಿರ್ಮಿಸುವುದು ದೇವಾಲಯಗಳಿಗೆ ಮೂಲಭೂತ ಸೌಕರ್ಯಗಳು ನೀಡುವುದು ನಮ್ಮ ತಂದೆ ತಾಯಿಯ ಆಸೆಯಾಗಿದೆ. ಅದನ್ನು ನಾನು ನಮ್ಮ ಕುಟುಂಬದವರು ಪಾಲಿಸುತ್ತಾ ಬಂದಿದ್ದೇವೆ ಈ ಕ್ಷೇತ್ರದ ಜನರ ಪ್ರೀತಿ ನಂಬಿಕೆಗೆ 30 ವರ್ಷಗಳಿಂದ ಸಮಾಜಸೇವಕರಾಗಿ ಕಾರ್ಯ ಮಾಡಲು ದೇವರುಗಳು ಆಶೀರ್ವಾದ ಮಾಡಿದ್ದಾರೆ. ಅದೇ ರೀತಿ ಮುಂದೆ ಜನ ಸೇವೆ ಮಾಡಲು ಅವಕಾಶ ಮಾಡಿ ನನ್ನ ಜೊತೆ ನೀವು ಕೈಜೋಡಿಸಿ ಎಂದು ಹೇಳಿದರು.
ನಂತರ ಕಮನಿಯ ಕ್ಷೇತ್ರವಾದ ಕ್ಯಾಮೇನಳ್ಳಿಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದ ವೀಕ್ಷಣೆ ಮಾಡಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಧನಸಹಾಯ ಮತ್ತು ನೆಲಕ್ಕೆ ಗ್ರಾನೈಟ್ ನೀಡುವುದಾಗಿ ತಿಳಿಸಿದರು. ಅಲ್ಲಿ ನಡೆದಿದ್ದ ಗ್ರಾಮಸ್ಥರು ಮಹಿಳೆಯರು ಸಮಾಜ ಸೇವಕರಾಗಿರುವ ನೀವು ಮುಂದೆ ಜನ ಸೇವಕರಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು ನೀವು ಚುನಾವಣೆಯಲ್ಲಿ ಜಯಶೀಲರಾಗಬೇಕು ಎಂದು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಅಂಬರೀಶ್ ಅಭಿಮಾನಿ ಬಳಗದ ಅಧ್ಯಕ್ಷರಾದ ಪರಮೇಶ್, ಯತೀಶ್, ಲಂಬುರಾಜಣ್ಣ, ಲಕ್ಷ್ಮೀಶ್ ಲಚ್ಚಿ ರಂಗನಾಥ್,ಗಂಗರಾಜ್, ಕರವೇ ನರಸಿಂಹರಾಜು ಎಲ್, ಕೆ ಜಿ ಆರ್ ರಮೇಶ್, ಇನ್ನೂ ಅನೇಕ ಮುಖಂಡರು ಮತ್ತು ಪೂಜಾರಿಕೆಯ ಕುಟುಂಬಸ್ಥರು ಭಾಗಿಯಾಗಿದ್ದರು.
ವರದಿ.ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















