ಕೊಪ್ಪಳ/ ಕುಕನೂರ : ತಾಲೂಕಿನ ಭಟಪನಹಳ್ಳಿ
ಗ್ರಾಮದಲ್ಲಿ ಮಹಿಳೆಯರೆ ಗುರ್ಜಿ ಹೊತ್ತು ಕೊಂಡು ಮನೆ ಮನೆಗೆ ಹೋಗುತ್ತಿದ್ದರು ಆದರೆ ಈಗ ಅವರ ಪರವಾಗಿ ಪುರುಷರೆ ತಲೆಯೆ ಮೇಲೆ ರೊಟ್ಟಿ ಮಾಡುವ ಹಂಚಿನ ಮೇಲೆ ,ಸಗಣಿಯಿಂದ ಗುರ್ಜಿ ಮಾಡಿ ,ಹೊತ್ತುಕೊಂಡು ಮನೆ ಮನೆಗೆ ಹೊದಾಗ ಮನೆಯವರು ಗುರ್ಜಿಗೆ ನೀರು ಹಾಕುತ್ತಾರೆ ಆಗ ಗುರ್ಜಿ ಹೊತ್ತು ಕೊಂಡವರು ಸುತ್ತಾಡುತ್ತಾರೆ, ಆಗ
:ಗುರ್ಜಿ, ಗುರ್ಜಿ ಎಲ್ಯಾಡಿ ಬಂದೆ, ಹಳ್ಳಕೊಳ್ಳ ತಿರಿಗ್ಯಾಡಿ ಬಂದೆ, ಕಾರ ಮಳೆಯೋ ಕಪ್ಪತ್ತು ಮಳೆಯೋ, ಸುರಿಸುರಿ ಸುರಿಯೋ ಮಳೆಯೋ…. ಎಂದು ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ರೈತರು ಪ್ರಾರ್ಥನೆ ಸಲ್ಲಿಸಿ ,ಜನರು ಕೊಟ್ಟಿರು ದವಸ ಧ್ಯಾನಗಳನ್ನು ಸಂಗ್ರಹಿಸಿ ಸಂಗಟಿ ಪ್ರಸಾದ ಮಾಡಿ ಮಳೆಗಾಗಿ ಸಂಪ್ರದಾಯ ಆಚರಿಸುತ್ತಾರೆ ಇದರಿಂದ ಮಳೆ ಬರುತ್ತದೆ ಎಂದು ಮಳೆ ದೇವರಲ್ಲಿ ಅಪಾರವಾದ ಭಕ್ತಿ ಇವರಲ್ಲಿದೆ.
ಪ್ರಾರಂಭದಲ್ಲಿ ಸುರಿದ ಆಶಾದಾಯಕ ಮಳೆಯಿಂದಾಗಿ ರೈತರು ಸಂತಸಗೊಂಡು ಮುಂಗಾರಿನ ಬಿತ್ತನೆಯಲ್ಲಿ ಹೆಸರು, ಗೋವಿನ ಜೋಳ, ಶೇಂಗಾ, ತೊಗರಿ, ಎಳ್ಳು, ಈರುಳ್ಳಿ,ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಭೂಮಿ ಒಡಲಲ್ಲಿ ರೈತರು ಬಿತ್ತನೆ ಮಾಡಿದ್ದಾರೆ ಆದರೆ ತೇವಾಂಶ ಕೊರತೆಯಿಂದಾಗಿ ಬೀಜ ಮೊಳಕೆ ಒಡೆದು ಬಾಡುತ್ತಿದೆ. ಸಾಲ ಶೂಲ ಮಾಡಿ ದುಬಾರಿ ಬೀಜ, ಗೊಬ್ಬರ ಬಿತ್ತಿದ ಬಾಡಿಗೆ ಕೊಟ್ಟು ಬಿತ್ತನೆ ಮಾಡಿ ,ಮಳೆಗಾಗಿ ಆಕಾಶದಕಡೆ ಮುಖ ಮಾಡಿದ್ದಾನೆ, ಆದರೆ ದಿನಂ ಪ್ರತಿ ಮೋಡ ಕವಿದ ವಾತವರಣದ ಉಂಟಾಗಿ ಮಳೆ ಬಾರದೆ ಬರಿ ಭಯಂಕರವಾಗಿ ಗಾಳಿ ಬಿಸಿ ಇದರಿಂದ ಬತ್ತಿ ಬಾಡಿದ ಒಣಗಿದ ಬೇಳೆಗಳು ಗಾಳಿಗೆ ಹಾರಿ ಹೋಗಿವೆ , ಬಾರದ ಮಳೆ ಒಂದು ಕಡೆಯಾದರೆ ,ಬಾಡುತ್ತಿರುವ ಬೆಳೆಗಳನ್ನು ಕೆಲವು ರೈತರು ಹೆಸರು, ಕೊತಂಬರಿ ಇತರ ಬೆಳೆಗಳನ್ನು ಹರಗಿದ್ದಾರೆ ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಬರದ ಛಾಯೇ ಅವರಿಸಿದ ಆದರಿಂದ ಕೊಪ್ಪಳ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೇಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನಾ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಒತ್ತಾಯಿಸಿದ್ದಾರೆ. ಸದ್ಯದಲ್ಲಿ ಮಳೆ ಬರಬೇಕು ಮಳೆ ದೇವ ಕರುಣಿಸಭೆಕು ಎಂಬುವುದು ರೈತರ ಆಶಯವಾಗಿದೆ.
- ಕರುನಾಡ ಕಂದ ಸುದ್ದಿ




















