ಬೆಳಗಾವಿ -ಚೆನ್ನಮ್ಮನ ಕಿತ್ತೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರ್ಕಾರಿ ಕಾರ್ಯ ನಿರ್ವಹಿಸುತ್ತಿರುವ ಬಿ ಎಲ್ ಓ ಗಳು ಕೆಲವು ಕಡೆ ಮನೆ ಮನೆಗೆ ತೆರಳದೆ ಒಂದೇ ಕಡೆ ಕುಳಿತು ಎಸ್.ಐ.ಆರ್. ನಮೂನೆ ಫಾರ್ಮ್ ಅನ್ನು ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದ್ದರಿಂದ ಎಲ್ಲಾ ಬಿ.ಎಲ್.ಒ ಗಳು ಪ್ರತಿ ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಕಿತ್ತೂರ ತಹಸೀಲ್ದಾರ ಅವರಿಗೆ ಸಮಾಜ ಸೇವಕರಾದ ಶ್ರೀ ಹಬೀಬ ಶಿಲೆದಾರ ಆಗ್ರಹ ಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಆಯೋಗ ಜೂನ್ 29 ರಿಂದ ಜುಲೈ 30 ರವರಿಗೆ ಮತದಾನ ಪಟ್ಟಿ ಪರಿಷ್ಕರಣ ಕಾರ್ಯ ನಡೆಯುತ್ತಿದ್ದು ನೀವು ಎರಡು ದಿನ ಮುಂಚಿತವಾಗಿಯೇ ಗಣತಿ ನಮೂನಿಯನ್ನು ಸಮಗ್ರ ಮಾಹಿತಿಯೊಂದಿಗೆ ನಿಮ್ಮ ಬೂತಿನ ಬಿ ಎಲ್ ಓ ಗಳಿಗೆ ಮುಟ್ಟಿಸಬೇಕು ಬಿ ಎಲ್ ಓ ಗಳು ನೀಡಿದ ನಮೂನೆಯನ್ನು ಎರಡು ಪ್ರತಿ ಜೆರಾಕ್ಸ್ ತೆಗೆಯಿಸಿ ಅದರಲ್ಲಿ ಒಂದರಲ್ಲಿ ಸಮಗ್ರ ಮಾಹಿತಿಯನ್ನು ಭರ್ತಿ ಮಾಡಿ ಸರಿ ಇದ್ದರೆ ಮಾತ್ರ ಮೂಲ ಗಣತಿ ನಮೂನೆಯಲ್ಲಿ ಭರ್ತಿ ಮಾಡಿ ಬಿ ಎಲ್ ಒ ಗಳಿಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದರು ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ಕೃಷಿ ಕೂಲಿ ಕಾರ್ಮಿಕರು ರೈತರು ಹಾಗೂ ಬಡವರು ಮತ್ತು ಅನಕ್ಷರಸ್ಥರು ಇದ್ದು ಗಣತಿ ನಮೂನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ತಿಳಿ ಹೇಳಬೇಕು ಮತ್ತು ನಮೂನೆ ಭರ್ತಿ ಮಾಡಿಸಲು ಸಹ ಸಹಕರಿಸಬೇಕೆಂದು ಅಧಿಕಾರಿಗಳಿಗೆ ತಿಳಿಯಪಡಿಸಿದರು.
ವರದಿ ಮಂಜು ಎಂ.ಚಿಕ್ಕಣ್ಣವರ




















