ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.ಜುಲೈ 5 ರಂದು ಮುಂಜಾನೆ ಸಮಯದಲ್ಲಿ 155 ನೇ ರವಿವಾರದ ಸತ್ಸಂಗ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ಮಹಾಳಿಂಗೇಶ್ವರ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಬೆಳಗ್ಗೆ ಸದ್ಗುರು ಶ್ರೀಸಿದ್ಧಾರೂಢರ 10 ನೇ ಅಧ್ಯಾಯದ ಪಾರಾಯಣ ನಂತರ ಆರೂಢರ ಪಂಚಾಮೃತ ಅಭಿಷೇಕ. ನಾಮಸ್ಮರಣೆ.ಭಜನೆ. ಹಿರಿಯ ಸೇವಾಧುರೀಣರಿಗೆ ಸತ್ಕಾರ.ಮಂಗಲ ಪ್ರಸಾದ ಜರುಗುವದೆಂದ ಕು.ಗುರುಪ್ರಸಾದ ಸ್ವಾಮೀಜಿ ಎಲ್ಲಾ ಕಾರ್ಯಕ್ರಮಗಳು ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ನಡೆಯುವದೆಂದು ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















