
ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಶ್ರೀ ಡಿ ಕೆ ಶಿವಕುಮಾರ್ ಅವರನ್ನು ಅವರ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಶ್ರೀ ಎಸ್ ರಘುನಾಥ್ ರವರು ಭೇಟಿ ಮಾಡಿ ಮಹಾ ಸಭೆಯ ಪರವಾಗಿ ಶುಭಾಶಯವನ್ನು ಕೋರಿದರು.
ಈ ಸಂಧರ್ಭದಲ್ಲಿ ಮಹಾ ಸಭೆಯ ಗೌರವವನ್ನು ಸ್ವೀಕರಿಸಲು ಮಹಾ ಸಭೆಗೆ ಬರಬೇಕೆಂದು ಮುಖ್ಯಮಂತ್ರಿಗಳನ್ನು ವಿನಂತಿಸಿಕೊಂಡಾಗ ಮುಂದಿನ ಎರಡು ವಾರಗಳಲ್ಲಿ ಖಂಡಿತವಾಗಿ ಬರುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಮಹಾಸಭೆಯ ಪ್ರದಾನ ಕಾರ್ಯದರ್ಶಿಗಳಾದ ಡಾ ಸತ್ಯಪ್ರಕಾಶ್, ಶ್ರೀ ಎ ಶಂಕರ್, ಶ್ರೀ ಚಂದ್ರಶೇಖರ್ ಹಾಗೂ ಪುರುಷೋತ್ತಮ್ ಉಪಸ್ಥಿತರಿದ್ದರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಶ್ರೀ ಎಸ್ ರಘುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















