ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವ ಝೂನೋಸಿಸ್ ದಿನ ಆಚರಣೆ

ಬಳ್ಳಾರಿ / ಕುರುಗೋಡು : ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಮ್ಮ ಕ್ಲಿನಿಕ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಇವರ ಸಹಯೋಗದಲ್ಲಿ ಸೋಮವಾರ ತಾಲೂಕು ಸಮುದಾಯ ಅರೋಗ್ಯ ಸಭಾಭವನದಲ್ಲಿ ವಿಶ್ವ ಝೂನೋಸಿಸ್ ದಿನಾಚರಣೆಯನ್ನು ಆಚರಿಸಲಾಯಿತು.
ದಂತ ವೈದ್ಯಾಧಿಕಾರಿಗಳಾದ ಡಾ||ಗಾಯತ್ರಿ ಮಾತನಾಡಿ, 1885 ರ ಜುಲೈ 6 ರಂದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಖಾಯಿಲೆಯಾದ ರೇಬೀಸ್ ರೋಗಕ್ಕೆ ಮೊದಲ ಲಸಿಕೆಯನ್ನು ಸರ್ ಲೂಯಿಸ್ ಪಾಶ್ಚರ್‌ರವರು ಯಶಸ್ವಿಯಾಗಿ ನೀಡಿದ ಸಂದರ್ಭದ ಸ್ಮರಣಾರ್ಥವಾಗಿ ವಿಶ್ವ ಝೂನೋಸಿಸ್ ದಿನವನ್ನು ಆಚರಿಸಲಾಯಿತು.
ಈ ವರ್ಷದ ಘೋಷವಾಕ್ಯ ಒಟ್ಟಾಗಿ ಕಾರ್ಯ ನಿರ್ವಹಿಸೋಣ ಸಮುದಾಯದ ಕ್ರಿಯಾಶೀಲತೆಯ ಮೂಲಕ ಝೂನೋಟಿಕ್ ರೋಗಗಳನ್ನು ತಡೆಗಟ್ಟೋಣ ಎಂದು ತಿಳಿಸಿದರು.
ತಾಲೂಕಿನ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಸಭೆಯನ್ನು ಹಮ್ಮಿಕೊಂಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಾಣಾಂತಿಕ ಖಾಯಿಲೆಗಳಿಂದ ಮಾನವರನ್ನು ರಕ್ಷಿಸಲು ಸೂಕ್ತ ಕ್ರಮಗಳ ಬಗ್ಗೆ ಗ್ರಾಮದ ಎಲ್ಲಾ ರೈತರು ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯ ಕೇಂದ್ರದ ವೈದ್ಯಧಿಕಾರಿಗಳಾದ ರೋಹಿಣಿ, ಜಿ.ಪಲ್ಲವಿ. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಮಂಜುನಾಥ, ಷಡಕ್ಷರಯ್ಯ ಸ್ವಾಮಿ, ಮಹೇಂದ್ರ ಕುಮಾರ್
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಡಿ.ಸುನೀತಾ, ಗಿರಿಜಾ, ರೇಣುಕಾ, ಜಯಶ್ರೀ ಸೇರಿದಂತೆ
ಶುಶ್ರೂಷಣಾಧಿಕಾರಿಗಳು, ಸಹ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ, ಕಿಶೋರಿಯರು, ಗರ್ಭಿಣಿಯರು, ಮಹಿಳೆಯರು ಹಿರಿಯರು ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!