ಇಂಡಿ : ದಿ. 05/07/2026 ರಂದು ನಡೆದ ಕಾ. ನಿ. ಪ ಧ್ವನಿ ಸಂಘಟನೆ ಸಭೆಯಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯ ಕುರಿತು ಚರ್ಚಿಸಲಾಯಿತು. ಎಲ್ಲಾ ಸದಸ್ಯರುಗಳಿಗೆ ಸಂಘದ ಐ. ಡಿ ಕಾರ್ಡ್ ವಿತರಿಸಿ ಸಂಘ ಬಲಪಡಿಸಲು ತಾಲೂಕು ಅಧ್ಯಕ್ಷರಾದ ಆನಂದ ಅಗರಖೇಡ ಮಾತನಾಡಿದರು ಮತ್ತು ಇತ್ತೀಚಿಗೆ ಜಿಲ್ಲೆಯಲ್ಲಿ ಪದಾಧಿಕಾರಿಗಳ ನೇಮಕ ಪ್ರಮಾಣಪತ್ರ ವಿತರಣೆ ರಾಜ್ಯ ಕಾರ್ಯದರ್ಶಿ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿತರಣೆ ಮಾಡಲಾಗಿದ್ದು ಇದರಲ್ಲಿ ಇಂಡಿ ತಾಲೂಕಿನ ಶ್ರೀ ಅಶೋಕ ನಾಯ್ಕಡಿ ರವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದಕ್ಕೆ ಇಂಡಿ ಅಧ್ಯಕ್ಷರು ಪದಾಧಿಕಾರಿಗಳು ಹರ್ಷವ್ಯಕ್ತ ಪಡಿಸಿ ಇಂಡಿ ತಾಲೂಕು ಕಾನಿಪ ಧ್ವನಿ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಸರ್ವ ಸದಸ್ಯರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಉಪಾಧ್ಯಕ್ಷರು ಗೌರವಾಧ್ಯಕ್ಷರು ಪಾಲ್ಗೊಂಡಿದ್ದರು.
ವರದಿ ಲೋಹಿತ್ ಕುಮಾರ್ ರೂಗಿ




















