ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವಿವಿಧ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಯಿತು. ನೀರಾವರಿ ಇಲಾಖೆ ವತಿಯಿಂದ ಸುಮಾರು 42 ಕೋಟಿ 69 ಲಕ್ಷ ರೂ. ಗಳ ವಿವಿಧ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ತಿಳಿಸಿದರು.
ಅವರು ಮಂಗಳವಾರ ಕೊತ್ವಾಡಿಪುರ, ಪಾಳ್ಯ, ಹುಲ್ಲಳ್ಳಿ, ದೇಬೂರು, ದೇವಿರಮ್ಮನಳ್ಳಿ , ನಗು ಡ್ಯಾಮ್, ಸೇರಿದಂತೆ ಅನೇಕ ಭಾಗಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನ ಮೂರು ವರ್ಷಗಳಲ್ಲಿ ಸಾವಿರದ ನಾನೂರ ಕೋಟಿ ಅನುದಾನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಇನ್ನೂ ಹೆಚ್ಚು ಅನುದಾನ ತಂದು ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಡಲೆಮೂರ್ತಿ, ಹುಲ್ಲಳ್ಳಿ ಬ್ಲಾಕ್ ಅಧ್ಯಕ್ಷರ ಶ್ರೀಕಂಠ ನಾಯಕ ಗ್ಯಾರೆಂಟಿ ಅಧ್ಯಕ್ಷರಾದ ಮಾರುತಿ, ಕೆಪಿಸಿಸಿ ಸದಸ್ಯರಾದ ಬಸವರಾಜ ಹಾಗೂ ಪಕ್ಷದ ನಾಯಕರು, ಸಾರ್ವಜನಿಕರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















