ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಳಕಲ್ಲ: ಹಿರಿಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಪ್ರಸಾದ ರೇವಡಿಯವರಿಗೆ ಭಾವಪೂರ್ಣ ಬೀಳ್ಕೊಡುಗೆ

ಇಳಕಲ್ಲ: ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಬದಾಮಿ ಹಾಗೂ ಇಳಕಲ್ಲ ಉಪ ಶಾಖೆಯಲ್ಲಿ ಸತತ 29 ವರ್ಷಗಳ ಕಾಲ ಅಭಿವೃದ್ಧಿ ಅಧಿಕಾರಿಯಾಗಿ (DO) ಸುದೀರ್ಘ ಸೇವೆ ಸಲ್ಲಿಸಿದ ಶ್ರೀನಿವಾಸ ಪ್ರಸಾದ ರೇವಡಿ ಅವರು ಧಾರವಾಡ ವಿಭಾಗದ ದಾಂಡೇಲಿ ಶಾಖೆಗೆ ಪದ್ಯೋನ್ನತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿಮಾ ಪ್ರತಿನಿಧಿಗಳ ಬಳಗ ಹಾಗೂ ಸ್ನೇಹಿತರ ವತಿಯಿಂದ ಇತ್ತೀಚೆಗೆ ನಗರದ ಕಂಠಿ ಸರ್ಕಲ್ ಬಳಿಯ ಶ್ರೀ ಬನಶಂಕರಿ ದೇವಸ್ಥಾನದ ಮಂಗಲ ಭವನದಲ್ಲಿ ಸನ್ಮಾನ ಹಾಗೂ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ರೇವಡಿಯವರ ಸೇವೆ ಎಲ್ಲರಿಗೂ ಮಾದರಿ : ವೈ. ನಾಗೇಶ್ವರರಾಮ್

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಳಕಲ್ಲ ಎಲ್‌ಐಸಿ ಉಪಶಾಖೆಯ ಸಹಾಯಕ ಆಡಳಿತ ಅಧಿಕಾರಿ ವೈ. ನಾಗೇಶ್ವರರಾಮ್ ಮಾತನಾಡಿ, “ಶ್ರೀನಿವಾಸ ಪ್ರಸಾದ ರೇವಡಿಯವರು ಕಳೆದ ೨೯ ವರ್ಷಗಳಿಂದ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಹಿರಿಯ ಅಧಿಕಾರಿಯಾಗಿ ಶಾಖೆಯ ಪ್ರಗತಿಗೆ ಅವರು ನೀಡಿದ ಕೊಡುಗೆ ಅಪಾರ. ಅವರ ಮುಂದಿನ ವೃತ್ತಿ ಜೀವನ ಹಾಗೂ ನಿವೃತ್ತಿ ಬದುಕು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲಿ” ಎಂದು ಹಾರೈಸಿದರು.

ಬದುಕಿಗೆ ಬೆಳಕಾದ ಮಹಾತ್ಮರು: ಕೆ ಡಿ ಓಲೇಕಾರ ಶ್ಲಾಘನೆ

ಮೂಗನೂರದ ಹಿರಿಯ ಎಲ್‌ಐಸಿ ಪ್ರತಿನಿಧಿ ಹಾಗೂ ಎಂಡಿಆರ್‌ಟಿ (MDRT) ಸದಸ್ಯ ಕೆ. ಡಿ. ಓಲೇಕಾರ ಮಾತನಾಡಿ, “ನಾನು ರಾಜಕೀಯದಲ್ಲಿದ್ದಾಗ ಎಲ್‌ಐಸಿ ಕ್ಷೇತ್ರಕ್ಕೆ ಬರಲು ರೇವಡಿಯವರೇ ಕಾರಣ. ವಿಮೆಯ ಬಗ್ಗೆ ನನಗೇನೂ ತಿಳಿಯದಿದ್ದಾಗ, ಬದುಕಿನಲ್ಲಿ ಹೇಗೆ ಮುನ್ನಡೆಯಬೇಕು ಎಂದು ಮಾರ್ಗದರ್ಶನ ನೀಡಿದರು. ಅವರ ಸಲಹೆಯಂತೆ ನಡೆದು ೨೮ ವರ್ಷಗಳ ಪ್ರತಿನಿಧಿತ್ವದಲ್ಲಿ ಮೊದಲ ವರ್ಷದಲ್ಲೇ ತ್ರಿಶತಕ ವೀರನಾದೆ. ನಂತರ ಸಿಎಂ ಕ್ಲಬ್ ಸದಸ್ಯನಾಗಿ ಯಶಸ್ವಿಯಾದೆ. ಈಗ 70 ವರ್ಷ ವಯಸ್ಸಾಗಿದ್ದರೂ ವರ್ಷಕ್ಕೆ 100 ಪಾಲಿಸಿಗಳನ್ನು ಮಾಡುತ್ತಿದ್ದೇನೆ. ಮೂರು ಬಾರಿ ಕಾರು ಹಾಗೂ ಪತ್ನಿಯೊಂದಿಗೆ ಪ್ರವಾಸದ ಬಹುಮಾನ ಪಡೆದಿದ್ದೇನೆ. ನನ್ನ ಬದುಕಿಗೆ ಬೆಳಕು ತೋರಿದ ಮಹಾತ್ಮರು ರೇವಡಿಯವರು ” ಎಂದು ಭಾವುಕರಾಗಿ ಸ್ಮರಿಸಿದರು.

ಗಣ್ಯರ ಅನಿಸಿಕೆಗಳು :

ಗಂಗಣ್ಣ ಇಳಕಲ್ಲ (ಹುನಗುಂದ): “ಪ್ರತಿನಿಧಿಗಳ ಕಷ್ಟದ ಸಮಯದಲ್ಲಿ ತಂದೆ ಹಾಗೂ ಸಹೋದರನ ಸ್ಥಾನದಲ್ಲಿ ನಿಂತು ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯಲು ರೇವಡಿಯವರು ನೀಡಿದ ಮಾರ್ಗದರ್ಶನ ಅನನ್ಯ.”

ಞಳಕಲ್ಲಿನ ಎಸ್ ಸಿ ಜುಜಾ (ವಾಲಿಬಾಲ್ ಗೆಳೆಯರ ಬಳಗ): “1997 ರಿಂದ ಅವಳಿ ತಾಲೂಕಿನಲ್ಲಿ ಚಿರಪರಿಚಿತರಾಗಿರುವ ರೇವಡಿಯವರು ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ. ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಅವರು ನಿವೃತ್ತಿಯ ನಂತರ ಇಳಕಲ್ಲನಲ್ಲೇ ಬಂದು ನೆಲೆಸಬೇಕು.”

ಇಳಕಲ್ಲದ ರಾಮಕೃಷ್ಣ ಹಂಟಾಟೆ: “ಪ್ರತಿನಿಧಿಗಳಿಗೆ ಕೇವಲ ಅಧಿಕಾರಿಯಾಗಿರದೆ ಆಪ್ತರಾಗಿ, ಸಹನಾ ಮೂರ್ತಿಯಾಗಿ ಒಳ್ಳೆಯ ಸೂಚನೆಗಳನ್ನು ನೀಡುತ್ತಿದ್ದರು.”

ಇಳಕಲ್ಲಿನ ರಾಜು ಕುಲಕರ್ಣಿ, ಹಾಗೂ ದಿನನಿತ್ಯದ ವಾಯುವಿಹಾರದ ಸಂದರ್ಭದಲ್ಲೂ ಅವರು ನೀಡುತ್ತಿದ್ದ ಜೀವನದ ಸಲಹೆಗಳು ನನ್ನನ್ನು ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ರೇವಡಿಯವರು ಅಪ್ಪಟ ಕನ್ನಡ ಅಭಿಮಾನಿಯಾಗಿದ್ದು, ಇಂದಿಗೂ ತಮ್ಮ ಸಹಿಯನ್ನು ಅಚ್ಚಗನ್ನಡದಲ್ಲೇ ಹಾಕುತ್ತಿರುವುದು ಹೆಮ್ಮೆಯ ವಿಷಯ.” ಹಾಗೂ ಇಳಕಲ್ ನ ಸುರೇಶ ಕರವಾ, ಮಾತನಾಡಿದರು

ಇಳಕಲ್ಲಿನ ಶ್ರೀಮತಿ ಸವಿತಾ ಹಿರೇಮಠ : “ರೇವಡಿಯವರ ಕುಟುಂಬ ನನ್ನ ತವರು ಮನೆಯಿದ್ದಂತೆ. ಯಾವುದೇ ಸಮಸ್ಯೆ ಹೇಳಿಕೊಂಡು ಹೋದರೂ ಮಗಳಂತೆ ಪ್ರೀತಿಯಿಂದ ತಿಳಿಹೇಳುತ್ತಿದ್ದರು. ಅವರ ಬೀಳ್ಕೊಡುಗೆ ಮನಸ್ಸಿಗೆ ತೀವ್ರ ನೋವು ತಂದಿದೆ.”

ಗಡಿ ಸುಂಕಾಪುರದ ಸಂಗಪ್ಪ ಮಾದರ ಮತ್ತು ಇಳಕಲ್ಲಿನ ಶಾಮ ಕರವಾ: “‘ಆಡು ಮುಟ್ಟದ ಗಿಡವಿಲ್ಲ, ರೇವಡಿಯವರು ತಿಳಿಯದ ವಿಷಯವಿಲ್ಲ’ ಎನ್ನುವಂತೆ ಅವರು ಸರ್ವ ವಿಷಯಗಳ ಕಣಜ. ಎಲ್ಲ ಸಮಸ್ಯೆಗಳನ್ನು ನಗುನಗುತ್ತಲೇ ಬಗೆಹರಿಸುತ್ತಿದ್ದರು.”

ರೇವಡಿ ದಂಪತಿಗೆ ಗೌರವ ಸನ್ಮಾನ :

ಇದೇ ಸಂದರ್ಭದಲ್ಲಿ ‘ಸಂಜೀವಿನಿ ತಂಡ’ದ ಹಿರಿಯ-ಕಿರಿಯ ಪ್ರತಿನಿಧಿಗಳು, ಎಲ್‌ಐಸಿ ಅಧಿಕಾರಿಗಳು, ಸಹಪಾಠಿ ಅಭಿವೃದ್ಧಿ ಅಧಿಕಾರಿಗಳಾದ ತಿರುಪತಿ ಕುಲಕರ್ಣಿ, ವಿನಾಯಕ ಹೆಬ್ಬಾಳ, ನಿವೃತ್ತ ಅಧಿಕಾರಿ ಅಶೋಕ ಗುಬ್ಬಿ, ಪ್ರತಿನಿಧಿ ಸುರೇಶ ಬಳ್ಳಾರಿ ಹಾಗೂ ಇಳಕಲ್ಲಿನ ಸ್ನೇಹಿತರ ಬಳಗದ ವತಿಯಿಂದ ಶ್ರೀನಿವಾಸ ಪ್ರಸಾದ ರೇವಡಿ ಹಾಗೂ ಅವರ ಪತ್ನಿ ಅಂಜನಾ ರೇವಡಿ ದಂಪತಿಯನ್ನು ಫಲ-ಪುಷ್ಪ, ಶಾಲು ಹೊದಿಸಿ ಭವ್ಯವಾಗಿ ಸನ್ಮಾನಿಸಲಾಯಿತು.

ಜನರ ಪ್ರೀತಿ ಮರೆಯಲಾಗದ ಕ್ಷಣ : ಶ್ರೀನಿವಾಸ ಪ್ರಸಾದ ರೇವಡಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಪ್ರಸಾದ ರೇವಡಿ, “ನನ್ನ ‘ಸಂಜೀವಿನಿ ತಂಡ’ ಒಂದು ಕುಟುಂಬದ ಸದಸ್ಯರಂತೆ ಕೆಲಸ ಮಾಡಿ ಎಲ್‌ಐಸಿಯಲ್ಲಿ ವಿಶೇಷ ಸಾಧನೆ ಮಾಡಿದೆ. ಕಳೆದ 29 ವರ್ಷಗಳಿಂದ ಬಾದಾಮಿ ಹಾಗೂ ಇಳಕಲ್ಲ ಭಾಗದ ಜನತೆ ನನ್ನನ್ನು ಸ್ವಂತ ಮಗನಂತೆ ಸಾಕಿ, ಪ್ರೀತಿ-ವಿಶ್ವಾಸ ನೀಡಿದ್ದಾರೆ. ಈ ಕ್ಷಣಗಳನ್ನು ನಾನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನ ಹಾಗೂ ನಿಮ್ಮೆಲ್ಲರ ಸಹಕಾರವೇ ನನ್ನ ಯಶಸ್ಸಿಗೆ ಕಾರಣ” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಎಲ್‌ಐಸಿ ಪ್ರತಿನಿಧಿ ವಸಂತ ಕಠಾರಿ ನಿರೂಪಿಸಿದರು, ಸುರೇಶ ಬಳ್ಳಾರಿ ಸ್ವಾಗತಿಸಿದರು ಮತ್ತು ರವಿ ಜಾಧವ ವಂದನಾರ್ಪಣೆ ಮಾಡಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!