ಹಲಸಿನ ಹಣ್ಣು ಸವಿದು ಬೀಜಗಳ ಜೋಡಿಸಲು
ತೊಂಡೆ ಹಣ್ಣಿನ ಗಾಲಿಯೊಂದ ನಡುವಲಿರಿಸಲು
ನೆತ್ತಿ ಬಾಲದ ಬೊಟ್ಟುಗಳ ಸುತ್ತಲೂ ಹರಡಲು
ಬಾಡಿದ ಸಂಜೆಮಲ್ಲಿಗೆ ಹೂ ಕುಡಿಗಳ ತುದಿಗೆ ತಾಗಿಸಲು
ಪುಟ್ಟ ಪುಟ್ಟ ತುಂಬೆ ಪುಷ್ಪಗಳಲಿ ಸಿಂಗರಿಸಲು
ಹೊಮ್ಮಿರುವ ಸುಲಲಿತ ಚಿತ್ತಾರದ ಕಡಲು
ಉದಯರಾಗದಿ ಮೂಡಿರುವ ಕಾವ್ಯದಾ ಸಾಲು
ಸುಮನಗಳಲ್ಲಿಗೆ ಸೂಸಲು ಹರುಷದಾ ಹೊನಲು
- ಲಲಿತಾ ಕೆ ಆಚಾರ್, ಬೆಂಗಳೂರು




















