ಗಿಡಗಳಿಗೆ ನೀರುಣಿಸುವ ಸಮಯದಲಿ
ಬಿಳಿ ಪಿಂಕಿನ ನಿತ್ಯ ಪುಷ್ಪಗಳಿತ್ತು ಅರಳುತಲಿ
ನೇರಳೆ ಸ್ಪಟಿಕ ಮೊಗ್ಗುಗಳಿತ್ತು ಗೊಂಚಲಿನಲಿ
ಕೆಂಪು ನಾಮದಾಸವಾಳಗಳು ಬಾಗಿತ್ತು ತೂಗುತಲಿ
ಕೂಗಿ ಕರೆದವು ಬರೆವೆವು ನಿಮ್ಮ ಜೊತೆಯಲಿ
ನಮ್ಮನೂ ಜೋಡಿಸಿ ಚಿತ್ತಾರ ಮಾಡೆಂದು ಉಲಿಯುತಲಿ
ಚಂದದಲಿ ಅಲಂಕರಿಸಿದೆ ರಂಗೋಲಿ ರೂಪದಲಿ
ಮೂಡಿತದುವೇ ಸುಲಲಿತ ಚಿತ್ತಾರವಾಗಿ ಕಾವ್ಯೋದಯದಲಿ
ಕಾತುರದಿ ಎದುರುನೋಡುತಿರುವ ಸಹೃದಯರಿಗೆ
ತಲುಪಿಸುತಿರುವೆ ಸಂತಸದಿ ಶುಭ ಮುಂಜಾವಿನಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















