ಕೊಪ್ಪಳ ಜಿಲ್ಲೆಯ ಯಲಬುರ್ಗಾ:ಬೇಸಿಗೆ ಕಾಲ ಬಂತಂದೆರೆ ಸಾಕು ಪ್ರಾಣಿ, ಪಕ್ಷಿಗಳಿಗೆ ದಾಹ ನೀಗಿಸಲು ನೀರಿನ ಹಾಹಾಕಾರ ಉಂಟಾಗುತ್ತದೆ
ಬಿಸಿಲ ಧಗೆಗೆ ಹಕ್ಕಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ.ಇದನ್ನರಿತ ಶಾಲಾ ಮಕ್ಕಳು ಪ್ಲಾಸ್ಟಿಕ್ ಬಟ್ಟಲು,ಕುಡಿಕೆಯಲ್ಲಿ ನೀರುಣಿಸುಲು,ಶಾಲಾ ಆವರಣದಲ್ಲಿನ ನೀರಿನ ಅರವಟ್ಟಿಗೆ ಅಳವಡಿಸಿ ಪ್ರಾಣಿ,ಪಕ್ಷಿಗಳ ದಾಹ ನೀಗಿಸಿ ಪಕ್ಷಿ ಪ್ರೇಮ ಮೆರೆದಿದ್ದಾರೆ.
ತಾಲೂಕಿನ ವನಜಭಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲಾ ಆವರಣದಲ್ಲಿರುವ ಗಿಡಮರಗಳಲ್ಲಿ ಬರುವ ಪಕ್ಷಿಗಳಿಗೆ ಬೇಸಿಗೆ ದಿನಗಳಲ್ಲಿ ನೀರಿನ ಬವಣೆ ನೀಗಿಸಲು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳ ಸಹಾಯವನ್ನು ಪಡೆದು ಆಹಾರ ಧಾನ್ಯಗಳನ್ನು ಮತ್ತು ನೀರುಗಳನ್ನು ಪ್ಲಾಸ್ಟಿಕ್ ಪುಟ್ಟಿಯಲ್ಲಿ ಹಾಕಿ ಅದನ್ನು ಮರ-ಗಿಡಗಳಲ್ಲಿ ತೂಗು ಹಾಕಿ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ವಹಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ
ಮಹೇಂದ್ರ ಬಿ.ಸಿ,ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಾದ ಬಸವಂತ ಮೇಟಿ,ಸುರೇಶ ಮೇಟಿ ಚಂದಾಲಿಂಗಪ್ಪ ಪರಂಗಿ ಭಾಗಿಯಾಗಿದ್ದರು.
“ಬೇಸಿಗೆಯಲ್ಲಿ ಹಕ್ಕಿ-ಪಕ್ಷಿಗಳು ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು ಮಕ್ಕಳು ಜೊತೆಗೂಡಿ ಆವರಣದಲ್ಲಿನ ಗಿಡಮರಗಳಿಗೆ ಬಟ್ಟಲು ನೇತು ಹಾಕಿ ನೀರು ಮತ್ತು ಆಹಾರ ಸಂಗ್ರಹಿಸಿಡುವ ವ್ಯವಸ್ಥೆ ಮಾಡಿದ್ದೇನೆ.
ಆಹಾರ,ನೀರು ಸೇವಿಸಲು ಬರುವ ಹಕ್ಕಿ-ಪಕ್ಷಿಗಳನ್ನು ನೋಡುವುದೇ ಒಂದು ಸಂತಸ. ಪ್ರಾಣಿ-ಪಕ್ಷಿಗಳು ಉಳಿದರೆ ಮನುಕುಲ ಉಳಿಯುತ್ತದೆ. ಆದ್ದರಿಂದ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಮಾಡುತ್ತೇವೆ.”ಎನ್ನುತ್ತಾರೆ ಶಿಕ್ಷಕರಾದ ನಾಗರಾಜ ಪಟಗಾರ ಅವರು.
-ಕರುನಾಡ ಕಂದ