Mysore breking
ಮೈಸೂರು:ಕೆಲವು ತಿಂಗಳುಗಳಿಂದ ಮೈಸೂರಿನ ಕೊರಗಜ್ಜ ದೇವಸ್ಥಾನದ ಅರ್ಚಕರಾದ ತೇಜು ಕುಮಾರ್ ರವರ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿರವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,
“ಸ್ವಾಮಿ ಕೊರಗಜ್ಜ” ಯಾವುದೇ ಒಂದು ಜಿಲ್ಲೆಗೆ ಸೀಮಿತವಾದ ದೈವವಲ್ಲ ಇಡೀ ಕರ್ನಾಟಕದ ಆರಾಧ್ಯ ದೈವ,
ಮೈಸೂರಿನಲ್ಲಿ ಅರ್ಚಕರಾದ “ತೇಜು ಕುಮಾರ್” ರವರಿಗೆ ‘ಕನಸಿನಲ್ಲಿ ಬಂದು’ |ಮೈಸೂರಿನಲ್ಲಿ ನೆಲೆಸುವುದಾಗಿ ‘ಅಜ್ಜಯ್ಯಾ’ ಹೇಳಿರುತ್ತಾರೆ|,
ಆದ ಕಾರಣ “ತೇಜು ಕುಮಾರ್” ರವರು |ಸ್ವಾಮಿ ಕೊರಗಜ್ಜನ ದೈವ ಸ್ಥಾನವನ್ನು ಸ್ಥಾಪಿಸಿರುತ್ತಾರೆ|, ಅಲ್ಲದೆ ಇಲ್ಲಿಗೆ ಬಂದ ಭಕ್ತರಿಗೆ ಒಳ್ಳೆಯದಾಗಿರುವುದು ಇದಕ್ಕೆ ಸಾಕ್ಷಿ,
ತುಳುನಾಡು ಬಿಟ್ಟು ಬೇರಾವುದೇ ಜಿಲ್ಲೆಗಳಲ್ಲಿ ಅಜ್ಜನ ದೈವ ಸ್ಥಾನವನ್ನು ಸ್ಥಾಪಿಸಬಾರದು ಎಂಬ ಹೇಳಿಕೆಯನ್ನು |ಕನ್ನಡ ಕ್ರಾಂತಿದಳ ಸಂಘಟನೆಯ ಅಧ್ಯಕ್ಷನಾದ| ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ಆದ ನಾನು ತೀವ್ರವಾಗಿ ಖಂಡಿಸಿ
ಹಾಗೂ ಅರ್ಚಕರಾದ “ತೇಜು ಕುಮಾರ್” ರವರಿಗೆ ಬೆದರಿಕೆ ಕರೆ ಬರುತ್ತಿದೆ ಎಂದು ಮಾಹಿತಿ ಬಂದಿದ್ದು ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.