
” ಅಮೇರಿಕ ವಿಸ್ಡಮ್ ಪೀಸ್ ಯೂನಿವರ್ಸಿಟಿದಿಂದ ಕೊಡಲ್ಪಡುವ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಶ್ರೀ ಸಂಜೀವ ಶಿಕ್ಷಣ ಮಹಾವಿದ್ಯಾಲಯ (ಬಿ. ಎಡ್ ) ಲಿಂಗಸೂಗೂರಿನ ಪ್ರಾಚಾರ್ಯರಾದ ಶ್ರೀ ವೆಂಕಟೇಶ ನವಲಕಲ್ ಇವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. “
ಶ್ರೀ ವೆಂಕಟೇಶ ತಂದೆ ಹನುಮಂತ ಸಾ ||ನವಲಕಲ್ ತಾ ||ಸಿರವಾರ ಜಿ ||ರಾಯಚೂರು ಇವರು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 24 ವರ್ಷಗಳಿಂದಲೂ ನಿರಂತರ ಸೇವೆ ಸಲ್ಲಿಸುತ್ತಿದ್ದು ಅದರಲ್ಲಿ ಮೊದಲ ಶಿಕ್ಷಕ ವೃತ್ತಿ ಸೇವೆ ಪ್ರಾರಂಭವಾಗಿದ್ದು 2002ರಲ್ಲಿ ಜ್ಞಾನೋದಯ ಪ್ರೌಢಶಾಲೆ ತೋರಣದಿನ್ನಿಯಲ್ಲಿ 2012ರ ವರೆಗೆ ಸುಮಾರು 10ವರ್ಷಗಳ ಕಾಲ ಶಿಕ್ಷಕರಾಗಿ ಹಾಗೂ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ, 2012-13ರಲ್ಲಿ ಜನನಿ ಪದವಿ ಪೂರ್ವ ಕಾಲೇಜು ಹಲಾಪುರದಲ್ಲಿ 2017-18ರ ವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ, 2015ರಿಂದ 2017ರ ವರೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪದವಿ ಪೂರ್ವ ಕಾಲೇಜ್ ಮಸ್ಕಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ 2018ರಿಂದ ಪ್ರಸ್ತುತ ಶ್ರೀ ಊಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ (ರಿ.) ಲಿಂಗಸೂಗೂರ ಶ್ರೀ ಸಂಜೀವ ಶಿಕ್ಷಣ ಮಹಾವಿದ್ಯಾಲಯ (ಬಿ. ಎಡ್ ) ಕಾಲೇಜು ಲಿಂಗಸೂಗೂರಿ ನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇದರ ಜೊತೆಗೆ ಹವ್ಯಾಸಿ ಗಾಯಕರಾಗಿ ಸುಮಾರು 8 ವರ್ಷಗಳಿಂದ ಹಾಡುತ್ತಿದ್ದು ಅದರಲ್ಲಿ ಬೆಂಗಳೂರಿನ ಸ್ಥಳೀಯ ಚಾನಲ್ ಗಳಾದ ಸರ್ವನಿನಾದಂ ಟಿ. ವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ ಮತ್ತು ಸಿ-ಚಾನೆಲ್ ನ ಮತ್ತೆ ಹಾಡಿತು ಕೋಗಿಲೆ ಕಾರ್ಯಕ್ರಮದಲ್ಲಿ ಹಾಡುವುದರ ಮೂಲಕ ಜನರ ಮನುಸ್ಸನ್ನು ಗೆದ್ದಿದ್ದಾರೆ ಹಾಗೂ ರಂಗಭೂಮಿ ಕಲಾವಿದರಾಗಿ ಮತ್ತು ಪತ್ರಕರ್ತರಾಗಿ ಹಾಗೂ ಸಾಮಾಜಿಕ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಎಲ್ಲಾ ರಂಗಗಳಲ್ಲಿನ ನಿರಂತರ ಸೇವೆ ಪರಿಗಣಿಸಿ ಅಮೇರಿಕ ವಿಸ್ಡಮ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ದಿನಾಂಕ 22-08-2026 ಶನಿವಾರದಂದು ಬೆಂಗಳೂರಿನ ಮಲ್ಲೇಶ್ವರಂ -18ನೇ ಕ್ರಾಸ್ ನ ಹತ್ತಿರ ರೇಣುಕಾಂಬಾ ಸ್ಟುಡಿಯೋದಲ್ಲಿ ಇವರನ್ನು ಸನ್ಮಾನಿಸಲಾಯಿತು.
ಇವರಿಗೆ ಶ್ರೀ ಊಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ (ರಿ.) ಲಿಂಗಸೂಗೂರಿನ ಅಧ್ಯಕ್ಷರುಗಳಾದ ಶ್ರೀ ಸಂಜೀವಕುಮಾರ ಕಂದಗಲ್ ರವರು ಶುಭ ಹಾರೈಸಿದರು.
ಅದೇ ರೀತಿಯಾಗಿ ಸಂಜೀವ ಡಿಪ್ಲೊಮೊ ಕಾಲೇಜು ಲಿಂಗಸೂಗೂರಿನ ಪ್ರಾಚಾರ್ಯರು ಆದ ಶ್ರೀ ಜಾವೀದ್ ಹುಸೇನ್ ಎಸ್. ಬಿ. ಜಿ ಲಾ ಕಾಲೇಜು ಪ್ರಾಚಾರ್ಯರು ಆದ ಶ್ರೀ ಅಮರೇಶ ಗೌಡುರು ಮತ್ತು ಎಂ. ಕಾಂ. ಕಾಲೇಜು ಪ್ರಾಚಾರ್ಯರು ಆದ ಶ್ರೀ ಶಂಭುಲಿಂಗಪ್ಪ ಹಾಗೂ ಎಲ್ಲಾ ಉಪನ್ಯಾಸಕರು ಮತ್ತು ಬಿ. ಎಡ್. ಕಾಲೇಜಿನ ಎಲ್ಲಾ ಪ್ರಶಿಕ್ಷಣಾರ್ಥಿಗಳು ಶುಭ ಹಾರೈಸಿದರು.
ವರದಿ : ಶ್ರೀ ವೆಂಕಟೇಶ್ ನವಲಕಲ್




















