ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದೇವಿ ಕರಲಮ್ಮ ದೇವಿಯ ಕುಂಭೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಶ್ರೀ ಮಾರುತೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಗಂಗಾಸ್ಥಳಕ್ಕೆ ಹೋಗಿ ನಂತರ ಗ್ರಾಮದಲ್ಲಿ ಕುಂಭ ಹೊತ್ತು ಗ್ರಾಮಸ್ಥರೊಂದಿಗೆ ಹೊರ ವಲಯದಲ್ಲಿ ಕರಲಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ಕುಂಭೋತ್ಸವ ಸಾವಿರಾರು ಭಕ್ತರ ಸಮೂಹದಲ್ಲಿ ಜರುಗಿತು.
ದೇವತೆ ಕರಲಮ್ಮ ಸನ್ನಿದಿಯಲ್ಲಿ ದಿವ್ಯಲಂಕಾರದಲ್ಲಿ ದೇವಿಗೆ ವಿಷೇಶ ಪೂಜಾ ಹಾಗೂ ಅಲಂಕಾರ ನೆರವೇರಿಸಲಾಯಿತು.




















