ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಶೆಯಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ : ಅದು ಸಾಮಾಜಿಕ ಜವಾಬ್ದಾರಿಯೂ ಹೌದು. ಡಾ ಮಹಾಂತೇಶ ಕಡಪಟ್ಟಿ

ಹುನಗುಂದ : ಮಾನವನ ವೈಯಕ್ತಿಕ ಜೀವನ, ಕುಟುಂಬ ಮತ್ತು ಸಮಾಜದ ಭವಿಷ್ಯವನ್ನು ಉತ್ತಮಗೊಳಿಸುವ ಒಂದು ಮಹತ್ವದ ಸಂಕಲ್ಪಕ್ಕಾಗಿ ಸೇರಿದ್ದೇವೆ. ಅದುವೇ ನಶಾಮುಕ್ತ ಯುವ ಸಂಕಲ್ಪ. ಯುವಜನತೆ ದೇಶದ ಶಕ್ತಿ. ಯುವಕರಲ್ಲಿ ಕನಸುಗಳಿವೆ, ಪ್ರತಿಭೆಯಿದೆ, ಶ್ರಮಿಸುವ ಸಾಮರ್ಥ್ಯವಿದೆ. ಆದರೆ ಮಾದಕ ವ್ಯಸನವು ಈ ಶಕ್ತಿಯನ್ನು ನಿಧಾನವಾಗಿ ದುರ್ಬಲಗೊಳಿಸುತ್ತದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಆರಂಭವಾಗುವ ಅಭ್ಯಾಸ, ಮುಂದೆ ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ ಮತ್ತು ಕುಟುಂಬ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ನಶೆಯಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ; ಅದು ಸಾಮಾಜಿಕ ಜವಾಬ್ದಾರಿಯೂ ಹೌದು. ಎಂದು ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ನಶಾಮುಕ್ತ ಯುವ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.“ನನಗೆ ಏನೂ ಆಗುವುದಿಲ್ಲ” ಎಂಬ ನಿರ್ಲಕ್ಷ್ಯಕ್ಕಿಂತ “ನನ್ನ ಜೀವನ ಅಮೂಲ್ಯ” ಎಂಬ ಅರಿವು ಯುವಕರಲ್ಲಿ ಮೂಡಬೇಕು. ಎಂದರು. ಬಾಗಲಕೋಟೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ತಜ್ಞರಾದ ಡಾ. ಭಾಸ್ಕರ್ ಮಾರಾ ಮಾತನಾಡುತ್ತಾ ಪ್ರತಿಯೊಬ್ಬ ಯುವಕ- ಯುವತಿಯೂ ಇಂದು ಒಂದು ಸಂಕಲ್ಪ ಮಾಡಬೇಕು—ನಾನು ಯಾವುದೇ ರೀತಿಯ ಮಾದಕ ವ್ಯಸನಕ್ಕೆ ಒಳಗಾಗುವುದಿಲ್ಲ; ನನ್ನ ಸ್ನೇಹಿತರನ್ನೂ ಅದರಿಂದ ದೂರವಿರಿಸುತ್ತೇನೆ; ನಶಾಮುಕ್ತ ಸಮಾಜ ನಿರ್ಮಾಣಕ್ಕೆ ನನ್ನಿಂದ ಸಾಧ್ಯವಾದ ಕೊಡುಗೆ ನೀಡುತ್ತೇನೆ ಎಂದು, ಯುವಕರ ಕೈಯಲ್ಲಿ ಮೊಬೈಲ್ ಇರಬಹುದು, ಆದರೆ ಅವರ ಮನಸ್ಸಿನಲ್ಲಿ ಗುರಿಯಿರಬೇಕು. ಅವರ ಜೀವನದಲ್ಲಿ ಮನರಂಜನೆ ಇರಬಹುದು, ಆದರೆ ಅದಕ್ಕಿಂತ ಮುಖ್ಯವಾಗಿ ಶಿಸ್ತು ಮತ್ತು ಸಾಧನೆಯಿರಬೇಕು. ನಾವು ಒಟ್ಟಾಗಿ ಪ್ರಯತ್ನಿಸಿದರೆ ನಮ್ಮ ದೇಶವನ್ನು ನಶಾಮುಕ್ತ ಸಮಾಜದತ್ತ ಕೊಂಡೊಯ್ಯಬಹುದು ಎಂದು ಹೇಳಿದರು.
ಮತ್ತೋರ್ವ ಮನೋರೋಗ ತಜ್ಞರಾದ ಡಾ ವಿನೋದ್ ಅಕ್ಕಸಾಲಿ ಮಾತನಾಡುತ್ತಾ ನಶೆ ಕ್ಷಣಿಕ ಆನಂದವನ್ನು ನೀಡಬಹುದು; ಆದರೆ ಅದರ ಪರಿಣಾಮಗಳು ದೀರ್ಘಕಾಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಪರಿಶ್ರಮ, ಕ್ರೀಡೆ ಮತ್ತು ಸಾಧನೆಯಿಂದ ದೊರೆಯುವ ಸಂತೋಷ ಜೀವನಪೂರ್ತಿ ನಮ್ಮೊಂದಿಗೆ ಇರುತ್ತದೆ.
ಆದ್ದರಿಂದ ಯುವ ಮಿತ್ರರೇ, “ನಶೆ ಬೇಡ, ಗುರಿ ಬೇಕು; ವ್ಯಸನ ಬೇಡ, ವ್ಯಾಯಾಮ ಬೇಕು; ನಿರಾಶೆ ಬೇಡ, ಸಾಧನೆಯ ಹಾದಿ ಬೇಕು.”
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ನಿಮ್ಮ ಸಮಯವನ್ನು ಗೌರವಿಸಿ ಮತ್ತು ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ ಎಂದರು. ಲೆಫ್ಟಿನೆಂಟ್ ಎಸ್ ಬಿ ಚಳಗೇರಿ ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ವಿ.ಮ.ವಿ.ವ.ಸಂಘದ ನಿರ್ದೇಶಕರಾದ ಡಿ.ಎಸ್.ಕೆಂದೂರ, ಎಂ.ಎಸ್.ಮಠ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್ ಆರ್ ಗೋಲಗೊಂಡ ವಂದಿಸಿದರು, ಪ್ರೊ.ಎಂ.ಆರ್.ಕಾಂಬಳೆ ಪ್ರತಿಜ್ಞಾ ವಿಧಿ ಬೋಧಿಸಿದರು, ಸೌಭಾಗ್ಯ ಅಂಗಡಿ ಪ್ರಾರ್ಥನೆ ಹಾಡಿದರು, ಡಾ ಎಸ್ ಆರ್ ನಾಗಣ್ಣವರ ನಿರೂಪಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!