ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಡವ ಭಾಷೆ ಸಂವಿಧಾನದ ೮ ನೇ ಪರಿಚ್ಚೇದ ಸೇರ್ಪಡೆಗೆ ಮಹೇಶ್ ನಾಚಯ್ಯ ಮನವಿ

ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಕೊಡವ ಸಾಂಸ್ಕೃತಿಕ ಉತ್ಸವ ಹಾಗೂ ಕೊಡವ ಸಾಂಸ್ಕೃತಿಕ ಸಿರಿಯು ನೆರೆದಿದ್ದವರನ್ನು ಮೆರಗುಗೊಳಿಸಿತು. ದೆಹಲಿ ಕರ್ನಾಟಕ ಸಂಘ ಹಾಗೂ ದೆಹಲಿ ಕೊಡವ ಸಮಾಜದ ಸಹಯೋಗದಲ್ಲಿ ನಡೆದ ಕೊಡವ ಸಾಹಿತ್ಯ ಉತ್ಸವದಲ್ಲಿ ಬಟ್ಟೆಪಾಟ್, ದುಡಿಕೊಟ್ ಪಾಟ್, ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಕೋಲಾಟ್, ತಾಲಿಸಾಟ್, ಗೆಜ್ಜೆತಂಡ್, ಕೊಡವ ನೃತ್ಯ ಹಾಗೂ ಕೊಂಬುಕೊಟ್ಟ್ ವಾಲಗತಾಟ್ ಇಡೀ ಕಾರ್ಯಕ್ರಮದ ಯಶಸ್ಸನ್ನು ಉತ್ತುಂಗಕ್ಕೆ ಏರಿಸಿತು.
ಕರ್ನಾಟಕ ಕೊಡವ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಸಭಿಕರನ್ನು ಬಟ್ಟೆಪಾಟ್ ಮೂಲಕ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವೇಣುಕುಮಾರ್, ದೆಹಲಿ ಕೊಡವ ಸಮಾಜ ಅಧ್ಯಕ್ಷರಾದ ಮಾಚಿಮಂಡ ಎ ಕಾರ್ಯಪ್ಪ, ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಜಂಟಿಯಾಗಿ ಉದ್ಘಾಟಿಸಿದರು.

ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ಕೊಡವ ಭಾಷೆ ಕೊಡವರ ಉಸಿರು, ಕನ್ನಡ ನಮ್ಮೆಲ್ಲರ ಜೀವ. ಪ್ರಪಂಚದೆಲ್ಲೆಡೆ ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಕರ್ನಾಟಕದ
ಜನತೆಯ ಸೇವೆ ಹಾಗೂ ಕಾಣಿಕೆ ದೊಡ್ಡದು. ಇದರಲ್ಲಿ
ಕೊಡವರ ಪಾಲು ಬಹುದೊಡ್ಡದು ಎಂದರು.
ಕೊಡವ ವಿಶಿಷ್ಟ ಸಂಸ್ಕೃತಿ, ಭಾಷೆ, ಸಾಹಿತ್ಯ,
ಜಾನಪದವು ರಾಜ್ಯ ಮತ್ತು ದೇಶದ ವೈವಿಧ್ಯಮಯ
ಸಂಸ್ಕೃತಿಯನ್ನು ಉಜ್ವಲಗೊಳಿಸಿದೆ ಎಂದರು.
ಭಾರತೀಯ ಸೇನೆಯಲ್ಲಿದ್ದು ದೇಶ, ವಿದೇಶಗಳಲ್ಲಿ
ದೇಶದ ಏಕತೆ, ಐಕ್ಯತೆಯ ದೈಯೋದ್ದೇಶವನ್ನು
ಹೊಂದಿ ದೇಶರಕ್ಷಣೆಯಲ್ಲಿ ದುಡಿದ ಮಹನೀಯರಾದ
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್
ತಿಮ್ಮಯ್ಯ ಸೇರಿದಂತೆ ಅಸಂಖ್ಯಾತ ಯೋಧರು
ಕೊಡಗಿನ ಕೀರ್ತಿ ಪತಾಕೆ ಹಾರಿಸುವಲ್ಲಿ
ಕಾರಣೀಭೂತರಾಗಿದ್ದಾರೆ ಎಂದು ಮಹೇಶ್ ನಾಚಯ್ಯ
ಅವರು ವಿವರಿಸಿದರು. ಕೊಡವ ಸಾಹಿತ್ಯವನ್ನು
ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ,
ನಡಿಕೇರಿಯಂಡ ಚಿಣ್ಣಪ್ಪ ಸೇರಿದಂತೆ ಅನೇಕರು
ಉಸಿರಾಗಿಸಿದ್ದಾರೆ. ಶಿಸ್ತು, ಸಂಯಮಕ್ಕೆ ಕೊಡವರು
ಹೆಸರಾಗಿರುವವರು. ಕರ್ನಾಟಕದ ಸಮಸ್ತ ಕನ್ನಡಿಗರಿಗೆ
ದೆಹಲಿಯಲ್ಲಿ ಕೊಡವರ ಐನ್‍ಮನೆ ಯಂತಿರುವ
ಕರ್ನಾಟಕ ಸಂಘದ ಮೂಲಕ ಕರ್ನಾಟಕದ ವಿಭಿನ್ನ ಸಂಸ್ಕೃತಿ ಪ್ರತಿಬಿಂಬಿಸಲು ಕಾರಣವಾಗಿರುವ ಸಂಘ
ಸ್ಥಾಪನೆಗೆ ಕಾರಣಕರ್ತರಾಗಿರುವ ಹಿರಿಯರಿಗೆಲ್ಲರಿಗೂ
ಕೊಡವ ಅಕಾಡೆಮಿಯ ಪರವಾಗಿ
ಚಿರಮಣಿಯಾಗಿರುತ್ತೇನೆ ಎಂದರು.
ಕೊಡವ ಭಾಷೆಗೆ ಸಂವಿಧಾನದ ಎಂಟನೇ
ಪರಿಚ್ಛೇದದಲ್ಲಿ ಕೇಂದ್ರ ಸರ್ಕಾರ ಸ್ಥಾನಮಾನ
ನೀಡುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ
ಮನವಿ ಮಾಡಿದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!