ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸರ್ಕಾರ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಂಜನಗೂಡು ಇವರ ವತಿಯಿಂದ ಕರ್ನಾಟಕ ರಾಜ್ಯವನ್ನು ರೇಬಿಸ್ ಮುಕ್ತಗೊಳಿಸಲು ಕೈಜೋಡಿಸಿ ರೇಬಿಸ್ ಅರ್ಥ ಮಾಡಿಕೊಳ್ಳುವುದರ ಬಗ್ಗೆ ಶಾಲಾ ಮಕ್ಕಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಉಪನ್ಯಾಸ ಕಾರ್ಯಕ್ರಮವನ್ನು ಪಶುವೈದ್ಯಕೀಯ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್ ಅವರು ನಡೆಸಿಕೊಟ್ಟರು.
ರೇಬಿಸ್ ಎಂದರೇನು, ನಾಯಿಗಳಲ್ಲಿ ರೇಬಿಸ್ ಗುಣದ ಲಕ್ಷಣಗಳು, ರೋಗ ಹೇಗೆ ಹರಡುತ್ತದೆ ಲಸಿಕೆಯನ್ನು ಹೇಗೆ ಸರಕಾರದಿಂದ ಉಚಿತವಾಗಿ ಪಡೆಯಬಹುದು ಎಂದು ಸವಿಸ್ತಾರವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ನಾಗೇಶ್ ನಾಯಕ್, ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ, ಪಶು ಪಾಲನಾ ಇಲಾಖೆ ವಾಹನ ಚಾಲಕ ಜಗದೀಶ್, ಅಟೆಂಡರ್ ಮಹೇಂದ್ರ ಹಾಜರಿದ್ದರು.




















