
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸೇನೆಯ ವತಿಯಿಂದ ಜೋಡೆತ್ತಿನ ಕೃಷಿಕರ ಸನ್ಮಾನ ಮತ್ತು ಮನವಿ
ಕಾಳಗಿಯಲ್ಲಿ 150ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರ ಬೃಹತ್ ಜಾಥಾ — ಸಿ.ಎಂಗೆ ಮನವಿ ಸಲ್ಲಿಕೆ
ಕಾಳಗಿ: ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುತ್ತಿರುವ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಕಾಳಗಿ ಪಟ್ಟಣದಲ್ಲಿ ಜೋಡೆತ್ತಿನ ಕೃಷಿಕರಿಗೆ ಸನ್ಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಳಗಿ ಪಟ್ಟಣದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ರೈತ ಮುಖಂಡರು ಹಾಗೂ ರೈತರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಜೋಡೆತ್ತಿನ ಕೃಷಿಕರಿಗೆ ಸರ್ಕಾರದಿಂದ ತಿಂಗಳಿಗೆ ₹11,000 ಪ್ರೋತ್ಸಾಹ ಧನ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.
ಸೆಪ್ಟೆಂಬರ್ 23ರ ಬೆಳಗ್ಗೆ 9 ಗಂಟೆಗೆ ಕಾಳಗಿ ಪಾಟಣ್ಣ ಹಾಗೂ 6 ತಾಂಡಗಳಿಂದ ರೈತರು ತಮ್ಮ ಎತ್ತುಗಳಿಗೆ ವಿಶೇಷ ಶೃಂಗಾರ ಮಾಡಿಕೊಂಡು, ಎತ್ತಿನ ಬಂಡಿಗಳೊಂದಿಗೆ ಕಾಳಗಿ ಪಟ್ಟಣದ ಆರಾಧ್ಯ ದೈವ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.
ಇಲ್ಲಿ ತಾಲೂಕಿನ ಪರಮಪೂಜ್ಯರ ಕಾಳಗಿ ಶ್ರೀ ಗಳು, ಮಂಗಲಗಿ ಶ್ರೀ ಗಳು, ಹೊಸಳಿ ಶ್ರೀ ಗಳು, ಕೋಡ್ಲಿ ಶ್ರೀ ಗಳು, ರಟಕಲ್ ಶ್ರೀ ಗಳು, ಅಮೃತ ಹಸ್ತದಿಂದ ಜೋಡೆತ್ತಿನ ಕೃಷಿಕರಿಗೆ ಸನ್ಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ನಂತರ ದೇವಸ್ಥಾನ ಆವರಣದಿಂದ ಬಸವೇಶ್ವರ ಚೌಕ – ಮೇನ್ ಬಜಾರ್ – ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದವರೆಗೆ ಎತ್ತಿನ ಬಂಡಿಗಳೊಂದಿಗೆ ಜಾಥಾ ನಡೆಯಿತು.
150ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರು ಆಗಮಿಸಿ, ಜೋಡೆತ್ತಿನ ಕೃಷಿಕರಿಗೆ ತಿಂಗಳಿಗೆ ₹11,000 ಪ್ರೋತ್ಸಾಹ ಧನ ನೀಡುವುದು ಸೇರಿದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಕಾಳಗಿ ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಧ್ಯಕ್ಷರು ವೀರಣ್ಣ ಗಂಗಾಣಿ , ಸಿದ್ರಾಮಪ್ಪ ಕಮಲಾಪುರ ರೈತ, ನೀಲಕಂಠ ಗುತ್ತೇದಾರ, ಶಿವರಾಜ್ ಪಾಟೀಲ್ ಗೊಣಗಿ, ಶಿವಕುಮಾರ್ ಕಮಲಾಪುರ, ಪುರಷೋತ್ತಮ್ ಗುತ್ತೇದಾರ್, ಜಗ್ಗು ಪಾಟೀಲ್, ಸೋಮಶೇಖರ್ ಚಿಂಚೋಳಿಕರ್, ರೇವಣಸಿದ್ಧ ಕಲಶೆಟ್ಟಿ, ಶೇಖರ್ ಮಾನಟ್ಟಿ, ಶಿವು ಸಾಲಿಮಠ,ಭೀಮರಾವ ಮಾಲ್ಗಣ,ಚಂದ್ರಕಾಂತ್ ವನಮಾಲ್ಲಿ, ಶರಣು ಬೇಲೂರ್, ಕಲ್ಲಪ್ಪಗೌಡ ಕದರಗಿ, ,ಆಕಾಶ್ ರಾಠೋಡ್, ಮಲ್ಲು ತೇಲಿ, ಮಲ್ಲು ಹೂಗಾರ್, ಸುಭಾಸ್ ಹುಳಗೇರಾ,ಶರಣು ಪೂಜಾರಿ, ದಿಲ್ ದಾರ್ ಸಾಬ್ , ಪಾಸುಮಿಯಾ ಸೇರಿದಂತೆ ಇನ್ನೂ ಅನೇಕ ರೈತರು ಇದ್ದರು.
“ಜೋಡೆತ್ತುಗಳು ನಮ್ಮ ಕೃಷಿಯ ಪರಂಪರೆ, ರೈತರು ದೇಶದ ಬೆನ್ನೆಲುಬು. ಆಧುನಿಕ ಕೃಷಿಯ ನಡುವೆ ಜೋಡೆತ್ತಿನ ಕೃಷಿಯನ್ನು ಉಳಿಸುವ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು” ಎಂಬುದು ರೈತ ಸಂಘದ ಪ್ರಮುಖ ಆಗ್ರಹವಾಗಿದೆ.
ಕಾರ್ಯಕ್ರಮದಲ್ಲಿ ಯಾವುದೇ ರಸ್ತೆ ತಡೆ ಅಥವಾ ಪ್ರತಿಭಟನೆ ಇರುವುದಿಲ್ಲ. ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಸಲಾಯಿತು ಮತ್ತು ಸಿಪಿಐ ಕಾಳಗಿ, ಹಾಗೂ ಪಿಎಸ್ಐ ಕಾಳಗಿ, ಪೊಲೀಸರು ಬಂದೋಬಸ್ತ್ ನೀಡಿದರು.




















