
ಹುನಗುಂದ : ತಾಲೂಕಿನ ತಿಮ್ಮಾಪುರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ 19 ರಂದು ಪ್ರಾರಂಭಗೊoಡು 20 ರಂದು ರವಿವಾರ 21 ರಂದು ಸಡಗರ ಸಂಭ್ರಮದೊoದಿಗೆ ಹತಾರ ಸೇವೆ ಹೇಳಿಕೆ ಸುತಗಾಯಿ ಹೊಡೆಯುವ ಕಾರ್ಯಗಳು ನೆರವೇರಿದವು.

ಕಳೆದ ಶನಿವಾರ ರಾತ್ರಿ ೮ ಗಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಿಂದ ತಿಮ್ಮಾಪುರದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ಕಿರುಸೂರ ಗ್ರಾಮಕ್ಕೆ ತೆರಳಿದರು. ನಂತರ ಅಲ್ಲಿನ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡಗಲಿ ಸಮೀಪದ ಮಲಪ್ರಭಾ ನದಿಗೆ ಹೋಗಿ ಸ್ನಾನ ಮಾಡಿದ ನಂತರ ನದಿಯಲ್ಲಿ ಪೂಜೆ ಪುನಸ್ಕಾರಗಳು ಜರುಗಿದವು. ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ಅಲ್ಲಿಯ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ನಂತರ ಅಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಅರ್ಚಕ ಸಂಜೀವಪ್ಪ ಪೂಜಾರಿ ದೈವಾದೀನ ಕಾಲೋಚಿತ ಉತ್ತರಿ ಹಸ್ತ, ಗಿಂಡೀಲಿ ನೀರು ಬಂಡೀಲಿ ಅನ್ನ ಎಂಬ ಹೇಳಿಕೆಯನ್ನು ಹೇಳಿದರು ಇದರ ಅರ್ಥವನ್ನು ಹೀಗೆ ವಿವರಿಸಬಹುದು ಸ್ಥಳೀಯ ಮುಖಂಡ ಹುನಗುಂದ ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮಾತನಾಡಿ ನಮ್ಮ ನಮ್ಮ ದೈವಕ ಅನುಸಾರ ಕಾಲಕ್ಕೆ ತಕ್ಕಂತೆ ಉತ್ತರಿ ಹಸ್ತ, ಮಳೆಗಳು ಅವರ ದೈವಕ್ಕ ಅನುಸಾರವಾಗಿ ಮಳೆಗಳು ಬರಬಹುದೆಂದು ಗಿಂಡಿಲ ನೀರು ಎಂದರೆ ಮಳೆ ಕಡಿಮೆ ಬಂಡಿಲಿ ಅನ್ನ ಎಂದರೆ ಒಳ್ಳೆಯ ಫಸಲು ಬರುತ್ತದೆ ಎಂಬ ಅರ್ಥ ಹೇಳಬಹುದಾಗಿದೆ . ನಂತರ ಪಲ್ಲಕ್ಕಿ ಹಾಗೂ ಭಕ್ತರು ತಿಮ್ಮಾಪುರ ಗ್ರಾಮಕ್ಕೆ ಬಂದು ತಲುಪಿದರು.

ದಿ. 20 ರಂದು ರವಿವಾರ ಬೆಳಿಗ್ಗೆ ಎರಡೂ ದೇವರಿಗೆ ರುದ್ರಾಭಿಷೇಕ ಕಳಸದ ಮೆರವಣಿಗೆ ಗೋಪುರಕ್ಕೆ ಕಳಸಾರೋಹಣ ಹೊಳೆಯಿಂದ ತಂದ ನೀರನ್ನು ದೇವರಿಗೆ ಪೂಜೆ ಸಲ್ಲಿಸಲಾಯಿತು ನಂತರ ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರ ಸೇವೆ ನಡೆಯಿತು , ಅಂದು ಸಾಯಂಕಾಲ ಪೂಜಾರಿ ಮನೆಯಿಂದ ಮಾವಿನ ಮರತಪ್ಪ ಎಂಬ (ಹನುಮಂತ ದೇವರ ಮೂರ್ತಿಯನ್ನು ಅರ್ಚಕರಿಂದ) ದೇವಸ್ಥಾನಕ್ಕೆ ತರಲಾಯಿತು. ನಂತರ ಐದು ಸುತ್ತು ಹತಾರ ಸೇವೆ ನಂತರ ಇದೆ ಸಂದರ್ಭದಲ್ಲಿ ಸುತ್ತುಗಾಯಿ ಒಡೆಯುವ ಕಾರ್ಯಗಳು ಯುವಕರಿಂದ ಜರುಗಿದವು, ನಂತರ ಕೊನೆಯ ಅರ್ಚಕ ಬಸವರಾಜ ಹನುಮಂತ ಪೂಜಾರಿ ಬರಮ ದೇವರ ಕಟ್ಟಯೆ ಮೇಲೆ ನಿಂತು ಉತ್ರಿ, ಊತ್ರಿ ಹಸ್ತ. ಚಿತ್ತಿ ಸಾಧಾರಣ ಮಳೆ ಸಾಧಾರಣ ಬೆಳೆ ಎಂಬ ಹೇಳಿಕೆಯನ್ನು ನುಡಿದರು.
ಇದರ ಅರ್ಥ ಬಗ್ಗೆ ಪತ್ರಕರ್ತ ಜಗದೀಶ ಹದ್ಲಿ ಮಾತನಾಡಿ ಉತ್ರಿ ಹಸ್ತ ಚಿಟ್ಟೆ ಮಳೆಗಳು ಸಾಧಾರಣ ಬಂದರು ಸಾಧಾರಣ ಬೆಳೆಗಳು ಬರುತ್ತವೆ ಎಂಬ ಅರ್ಥ ಹೇಳಬಹುದಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರತಿ ಮನೆಮನೆಯವರು ಹಾಗೂ ಸುತ್ತಗಾಯಿಯನ್ನು ಒಡೆದು ತಮ್ಮ ಹರಕೆಯನ್ನು ಸಲ್ಲಿಸಿದರು.
ಈ ಜಾತ್ರೆಯಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು ಎಂದು ವ್ಯಾಪಾರಸ್ಥರು ತಿಳಿಸಿದರು. ಜಾತ್ರೆಯ ಅಂಗವಾಗಿ ಪ್ರತಿಯೊಂದು ಮನೆಗಳ ಮುಂದೆ ರಂಗೋಲಿ ಓಣಿಗಳಲ್ಲಿ ಕಳಸದ ಮೆರವಣಿಗೆ ಸಂದರ್ಭದಲ್ಲಿ ಪೂಜೆ , ಕಾಯಿ ಒಡೆಯುವದು ಮುಂತಾದ ಸಂಪ್ರದಾಯ ಪದ್ದತಿಗಳು ಸಾಮಾನ್ಯವಾಗಿ ಕಂಡುಬ೦ದವು.
ಈ ಜಾತ್ರೆ ಮಹೋತ್ಸವದಲ್ಲಿ ಚಿತ್ತರಗಿ ಕಿರಸೂರ ಹಡಗಲಿ, ಬೇವೂರ, ಹಳ್ಳೂರು, ಬಗವತಿ, ಹುನಗುಂದ ಇಲಕಲ್ಲ ಹಿರೆಮಾಗಿ, ಮೆಂದಾಪೂರು ಗಂಗೂರು ಹಿರೇಮಾಗಿ ಹಳ್ಳೂರ ,ಬೇವೂರ ಬಾಗಲಕೋಟ ಬಗವತಿ ಮುಂತಾದ ಸದ್ಭಕ್ತರು ದೇವಸ್ಥಾನಗಳಿಗೆ ತೆರಳಿ. ಭಕ್ತಿಯ ನಮನೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದವು.
ಜಾತ್ರೆಯಲ್ಲಿ ಸುವ್ಯವಸ್ಥೆ ಕಾಪಾಡಲು ಹುನಗುಂದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ ಎನ್ ಶಿರಹಟ್ಟಿ ಪೇದೆ ಎಂಎನ್ ಬಾಲರೆಡ್ಡಿ ಹಾಗೂ ಹೋಂ ಗಾರ್ಡ್ಸ್ ಗಳು ವ್ಯವಸ್ಥೆ ಕಲ್ಪಿಸಿದರು.
- ಕರುನಾಡ ಕಂದ ಸುದ್ದಿ




















