
ತಿಮ್ಮಾಪುರ : ಪ್ರತಿ ವರ್ಷದಂತೆ ಈ ವರ್ಷವೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪುರ ಗ್ರಾಮದ ಆರಾದ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚಿಗೆ ಮಹಾರಥೋತ್ಸವ ಸಡಗರ ಸಂಭ್ರಮದಿoದ ನೆರವೇರಿತು.
ಅಂದು ಮುಂಜಾನೆ ಬಸವೇಶ್ವರನಿಗೆ ರುದ್ರಾಭಿಷೇಕ ಮಂಗಳಾರತಿ ಜರುಗಿತು.
ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಗಿತ್ತು ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು.
ರಥೋತ್ಸವದ ಪೂರ್ವದಲ್ಲಿ ಗ್ರಾಮದರಲ್ಲಿ ಉಚ್ಚಯ್ಯ (ಸಣ್ಣ ತೇರು)ನ್ನು ಪಾದಗಟ್ಟೆಯವರಿಗೆ ಎಳೆಯಲಾಯಿತು.
ಕಳೆದ ೨೦೦೦ ಇಸ್ವಿಯಲ್ಲಿ ಚಿತ್ತರಗಿ-ಇಲಕಲ್ಲನ ವಿಜಯ ಮಹಾಂತಶ್ರೀಗಳು ಕೊಳೂರ ಶ್ರೀಗಳು, ಹಡಗಲಿ- ನಿಡಗುಂದಿಯ ರುದ್ರಮುನಿ ಶ್ರೀಗಳು ಸಾನಿಧ್ಯದಲ್ಲಿ ಪ್ರಾರಂಭಗೊoಡು 26 ವರ್ಷದ ರಥೋತ್ಸವವನ್ನು ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳು ಗ್ರಾಮದ ವೇ.ಮೂ. ಬಸಯ್ಯ ಹೀರೇಮಠ ಹಾಗೂ ಗಣ್ಯರು ಸಾಮೂಹಿಕವಾಗಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.
ಅಲಂಕಾರಗೊಂಡ ರಥ: ವಿವಿಧ ಬಣ್ಣದ ಧ್ವಜ ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು.
ರಥೋತ್ಸವದಲ್ಲಿ ತಿಮ್ಮಾಪುರ, ಹಡಗಲಿ, ಚಿತ್ತರಗಿ, ಹುನಗುಂದ ಇಲಕಲ್ಲ ಅಮರಾವತಿ, ಬೇವೂರ, ಹಳ್ಳೂರ, ಭಗವತಿ, ಬೆಳಗಲ್ಲ, ಇದ್ದಲಗಿ, ಧನ್ನೂರ ಕೂಡಲಸಂಗಮ, ಬೆಂಗಳೂರ ಸೇರಿದಂತೆ ವಿವಿಧ ಮಹಾರಾಷ್ಟ್ರ ಕೊಲ್ಹಾಪೂರ ಪುಣೆ ಮಂಗಳೂರಿನ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ಜಾತ್ರೆಯಲ್ಲಿ ಸುವ್ಯವಸ್ಥೆ ಕಾಪಾಡಲು ಹುನಗುಂದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ ಎನ್ ಶಿರಹಟ್ಟಿ ಪೇದೆ ಎಂಎನ್ ಬಾಲರೆಡ್ಡಿ ಹಾಗೂ ಹೋಂ ಗಾರ್ಡ್ಸ್ ಗಳು ವ್ಯವಸ್ಥೆ ಕಲ್ಪಿಸಿದರು.
- ಕರುನಾಡ ಕಂದ ಸುದ್ದಿ




















