ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ – ಎನ್. ಹೇಮಗಿರಿಗೌಡ

ಸಹಕಾರ ಸಂಘದ 5ನೇ ವರ್ಷದ ವಾರ್ಷಿಕ ಮಹಾಜನ ಸಭೆ

ನಾಡ ಗೀತೆ ರೈತಗೀತೆಯೊಂದಿಗೆ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆಗೆ ಚಾಲನೆ.

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಇಂದು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ
ಸಂಘದ ಅಧ್ಯಕ್ಷರಾದ ಎನ್ ಹೇಮಗಿರಿ ಗೌಡ್ರು ಜ್ಯೋತಿ ಬೆಳಗುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, 2021ರಲ್ಲಿ ಕಾರ್ಯರಂಭ ಮಾಡಿದ್ದು, 535 ಷೇರುಗಳನ್ನು ಹೊಂದಿದೆ, ಸಂಘದ ಷೇರುದಾರ ಸದಸ್ಯರು, ರೈತರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿ 5ವರ್ಷಗಳನ್ನು ಪೂರೈಸಿರುವುದು ಸಂತೋಷದ ವಿಷಯವಾಗಿದೆ, ನಮ್ಮ ಸಂಘದಿಂದ ರೈತರಿಗೆ 43.60 ಲಕ್ಷ ಕೆ.ಸಿ.ಸಿ ಸಾಲ, 22.50 ಲಕ್ಷ ಬಿಡಿಪಿ ಸಾಲ ವಿತರಿಸಿದೆ, 17.10ಲಕ್ಷ ಮಧ್ಯಮಾವಧಿ ಟ್ರಾಕ್ಟರ್ ಮತ್ತು ಪೈಪುಲೈನ್ ಸಾಲ ನೀಡಿದ್ದು, ಸಂಘವು ಗಣಕೀಕೃತ ಆಡಳಿತ ನಿರ್ವಹಿಸುತ್ತಿದೆ, 5ವರ್ಷಗಳಿಂದ ಸತತವಾಗಿ ಲಾಭದಲ್ಲೇ ನೆಡೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ 61, 174 ರೂ ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ವಿ. ರವಿ ಯವರು ಗ್ರಾಮದ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಿಕೊಂಡು, ಯಶಸ್ವಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿ, ಸಂಘದ ವಾರ್ಷಿಕ ಜಮಾ ಖರ್ಚು, ಲಾಭ ಹನಿ, ಷೇರು, ಲೆಕ್ಕ ಪರಿಶೋಧನ ವರದಿ ವಂದಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ. ವೀರಣ್ಣ, ಎನ್ ಕೊಟ್ರೇಶ, ಬಿ ಮಾರುತಿ, ಹೆಚ್ ಎಂ ವೀರಭದ್ರಯ್ಯ, ಎನ್ ಮಂಜಣ್ಣ, ಬಸಣ್ಣ ಚಂದ್ರಪ್ಪ, ಹಾಗೂ ಷೇರುದಾರ ಸದಸ್ಯರು, ಗ್ರಾಮದ ರೈತರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:ಕೆ.ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!