ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೌರ ನೌಕರರ ಸೇವೆಗೆ ಗೌರವ ನೀಡುವ ಜೊತೆಗೆ ಸೌಲಭ್ಯವನ್ನು ನೀಡಬೇಕಿದೆ – ಮನೋಹರ್, ಯೋಜನಾ ನಿರ್ದೇಶಕರು

ಕೊಟ್ಟೂರು – ಪಟ್ಟಣ ಪಂಚಾಯಿತಿ ಕೊಟ್ಟೂರು ಹಾಗೂ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸಹಭಾಗಿತ್ವದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಯೋಜನಾ ನಿರ್ದೇಶಕರಾದ ಮನೋಹರ್ ರವರು ಪೌರಕಾರ್ಮಿಕರ ಸೇವೆಯು ನಿರಂತರವಾಗಿರುತ್ತದೆ. ಈ ರೀತಿಯಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರಿಗೆ ಸಣ್ಣ ಪ್ರಮಾಣದಲ್ಲಾದರೂ ಸೇವಾ ಸೌಲಭ್ಯವನ್ನು ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಪಟ್ಟಣದಲ್ಲಿ ಸ. ನಂ. 529 ಬಿ/3 ವಿಸ್ತೀರ್ಣ 2.73 ಎಕರೆ ಜಮೀನಿನಲ್ಲಿ 24 ಜನ ಪೌರ ಕಾರ್ಮಿಕರಿಗೆ ನಿವೇಶವನ್ನು ನೀಡಲು ತೀರ್ಮಾನಿಸಲಾಗಿದ್ದು, ಇನ್ನು ವಾರದಲ್ಲಿ ಹಕ್ಕುಪತ್ರವನ್ನು ವಿತರಣೆ ಮಾಡಲಾಗುವುದು. ಉಳಿದಂತೆ ವಾಹನ ಚಾಲಕರು ಹಾಗೂ ಇತರೆ ಪೌರ ನೌಕರರಿಗೆ ಪಟ್ಟಣದಲ್ಲಿನ ಸಿ.ಎ. ಸೈಟಿನಲ್ಲಿ ಮನೆಗಳನ್ನು ನಿರ್ಮಿಸಿ ಅವರು ನಿವೃತ್ತಿಯಾಗುವವರೆಗೆ ವಾಸವಿರುವಂತೆ ಸೌಲಭ್ಯ ಕಲ್ಪಿಸಲಾಗುವುದು. ಸದರಿ ಕಾರ್ಯವನ್ನು 1 ತಿಂಗಳಲ್ಲಿ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಡಿ. ದುರುಗಪ್ಪ ಇವರು ಕೊಟ್ಟೂರು ಪಟ್ಟಣದಕ್ಕೆ ಕಾರ್ತಿಕ ಹಾಗೂ ಜಾತ್ರೆಗೆ ಲಕ್ಷ ಲಕ್ಷ ಜನರು ಅಗಮಿಸುತ್ತಾರೆ.
ಈ ಸಮದಲ್ಲಿ ಪಟ್ಟಣವನ್ನು ಸ್ವಚ್ಛವಾಗಲು 24 ಗಂಟೆ ಕೆಲಸ ನಿರ್ವಹಿಸುತ್ತಾರೆ. ಯಾವುದಾದರೂ ಅನಾಥ ಶವ ಕಂಡರೆ ಪೊಲೀಸ್ ಸಿಬ್ಬಂದಿಯವರ ಜೊತೆ ಪೌರ ನೌಕರರು ಯಾವುದೇ ರೀತಿಯ ಅಸಹ್ಯ ಪಟ್ಟುಕೊಳ್ಳದೇ ಸಾಗಿಸಲು ಶ್ರಮಿಸುತ್ತಾರೆ. ಇವರಿಗೆ ಅಗತ್ಯ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.

ಕೊಟ್ಟೂರು ಪೌರ ನೌಕರರ ಸಂಘದ ಉಪಾಧ್ಯಕ್ಷನಾದ ಶಂಕ್ರಪ್ಪ ಯಾರಾದರೂ ಬರಲಿ ಬಿಡಲು ನಮ್ಮ ಕಾರ್ಯ ಮಾತ್ರ ನಿಲ್ಲುವುದಿಲ್ಲ. ಸಾರ್ವಜನಿಕರಿಗೆ ಹಸಿಕಸ-ಒಣಕಸ ಬೇರ್ಪಡಿಸಿ ಎಂದು ವಿನಂತಿಸಿಕೊಂಡರೂ ಸಹಕರಿಸುವುದಿಲ್ಲ. ಆದರೂ ನಾವು “ಪರಿಶ್ರಮದ ದೇವಾಲಯ”ವಾದ ಕಸವಿಲೇವಾರಿ ಘಟಕದಲ್ಲಿ ಬೇರ್ಪಡಿಸಿ ವಿಲೇವಾರಿ ಮಾಡುತ್ತೇವೆ ಎಂದರು.

ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಪ್ರಭಾಕರ್ ಇವರು ಪೌರಕಾರ್ಮಿಕರ ದಿನ ಎಂದರೆ ಹಬ್ಬದ ದಿನವಿದ್ದಂತೆ. ಪೌರಕಾರ್ಮಿಕರಿಗೆ ಈ ದಿನ ಸರ್ಕಾರ ರಜೆ ಘೋಷಿಸಿ ಆಚರಣೆ ಮಾಡುತ್ತಿದೆ. ಅದರೆ ಪೌರ ನೌಕರರು ಮಾತ್ರ ರಜೆ ಇಲ್ಲದೇ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರ ಆರೋಗ್ಯಕ್ಕೆ ಶ್ರಮಿಸುವವರು. ಬೀದಿಯಲ್ಲಿ ಬಿದ್ದ ನಾಯಿ ಮುಂತಾದ ಪ್ರಾಣಿಗಳು, ಕಸ, ಕಡ್ಡಿ, ಚರಂಡಿಯನ್ನು ಸ್ವಚ್ಛಗೊಳಿಸಿ ಪಟ್ಟಣವನ್ನು ನಿರಂತರವಾಗಿ ಸ್ವಚ್ಛವಾಗಿಡಲು ಶ್ರಮಿಸುತ್ತಾರೆ. ಕರೋನಾ ಸಮಯದಲ್ಲಿ ಮೃತ ವ್ಯಕ್ತಿಗಳ ಸಂಬಂಧಿಗಳು ಯಾರೂ ಬಾರದೇ ಇದ್ದರೂ ಸಹ ಪೌರ ಕಾರ್ಮಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ. ನಾನು ಅಧ್ಯಕ್ಷನಾಗಿ ಪೌರ ನೌಕರರ ಏಳಿಗೆಗೆ, ಅವರ ನಿರಂತರ ಅನುಕೂಲ ಕಲ್ಪಿಸಿಕೊಡಲು ಶ್ರಮಿಸುತ್ತೇನೆ ಎಂದರು.

ಮುಖ್ಯಾಧಿಕಾರಿಗಳಾದ ನಸರುಲ್ಲಾ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪೌರಕಾರ್ಮಿಕರು ನಮ್ಮ ಪಟ್ಟಣವನ್ನು ಸ್ವಚ್ಛವಾಗಿಡಲು ಜನರು ಏಳುವ ಮುನ್ನವೇ ಬಂದು, ಸ್ವಚ್ಛತೆ ಕಾರ್ಯವನ್ನು ನೆರವೇರಿಸುವ ಇವರ ಕಾರ್ಯ ಶ್ಲಾಘನೀಯ. ಈ ಕಾರಣದಿಂದ ದಿನಾಚರಣೆಯ ಈ ಸಮಯದಲ್ಲಿ ಅವರಿಗೆ ರೂ.7000/- ಗಳ ಚೆಕ್ ಗಳನ್ನು ನೀಡಲಾಗುತ್ತಿದೆ. ಪೌರ ನೌಕರರಿಗೆ ನಿವೇಶನ, ಮನೆ ನಿರ್ಮಿಸಿಕೊಟ್ಟು ಅವರ ಸೇವೆಗೆ ಗೌರವ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೊಟ್ಟೂರು ಪೌರ ನೌಕರರ ಸಂಘದ ಅಧ್ಯಕ್ಷ ಮಾದೂರು ಕೊಟ್ರೇಶ್, ಹೆಲ್ತ್ ಇನ್ಸ್ಪೆಕ್ಟರ್ ಅನುಷಾ, ಕೇಷವಾ, ಪರಸಪ್ಪ, ಮುತ್ತುರಾಜ್ ಮುಂತಾದವರು ಇದ್ದರು. ಸಿ ಮ ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಪೌರ ನೌಕರರಿಗೆ ಆರೋಗ್ಯ ಸುರಕ್ಷಾ ಕಿಟ್ ಗಳನ್ನು ವಿತರಿಸಿದರು.
ವರದಿ: ಕೆ. ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!