ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರಣಿ ಅಪಘಾತದಲ್ಲಿ ಮೃತಪಟ್ಟವರ ಆಭರಣಗಳು ನಾಪತ್ತೆ : ಕ.ರ.ವೇ.ಯಿಂದ ದೂರು ದಾಖಲು

ಕುಶಾಲನಗರ: ಆನೆ ಕಾಡು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ರತನ್ ಉಣ್ಣಿಯವರ ಶರೀರದಲ್ಲಿದ್ದ ಆಭರಣಗಳನ್ನು ದೋಚಿರುವ ಪ್ರಕರಣ ಕುರಿತು ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೆ.20 ರಂದು ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರತನ್ ಉಣ್ಣಿಯವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭದಲ್ಲಿ ಇ.ಸಿ.ಜಿ ತೆಗೆಯಲು ಕೊಂಡೊಯ್ಯುವವರೆಗೂ ಅವರ ಶರೀರದಲ್ಲಿ ಚಿನ್ನದ ಆಭರಣಗಳು ಇರುವುದನ್ನು ಮೃತಪಟ್ಟ ರತನ್ ಉಣ್ಣಿಯವರ ಸ್ನೇಹಿತರು ಗಮನಿಸಿದ್ದು, ತದನಂತರ ಆಭರಣಗಳನ್ನು ಅಲ್ಲೇ ತೆಗೆದಿರಿಸಿದ್ದಾರೋ ಅಥವಾ ಶವಾಗಾರದಲ್ಲಿ ನಾಪತ್ತೆಯಾಗಿದೆಯೋ ಎಂಬ ಅನುಮಾನಗಳು ಉಂಟಾಗಿತ್ತು.

ವೈದ್ಯರು ರತನ್ ಅವರನ್ನು ಇ.ಸಿ.ಜಿ ಮಾಡಲು ಕರೆದುಕೊಂಡು ಹೋದಾಗ, ಅವರ ಕೊರಳಲ್ಲಿ ಚಿನ್ನದ ಚೈನ್ ಹಾಗೂ ಕಿವಿಯಲ್ಲಿ ಓಲೆ ಇತ್ತು. ರತನ್ ಅವರ ಸಂಬಂಧಿಯೇ ಅವರನ್ನು ಇಸಿಜಿ ಕೋಣೆಗೆ ಬಿಟ್ಟು ಬಂದಿದ್ದರು. ನಂತರ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಗಾಡಿಯಲ್ಲಿ ಶವಾಗಾರಕ್ಕೆ ಸಾಗಿಸಿದ್ದರು.
ಮಹಜರು ಮತ್ತು ಮರಣೋತ್ತರ ಪರೀಕ್ಷೆ ಆಗುವವರೆಗೆ ಆಸ್ಪತ್ರೆಯವರು ಯಾರನ್ನೂ ಒಳಗಡೆ ಬಿಟ್ಟಿರಲಿಲ್ಲ. ಮರುದಿನ ಮೃತರ ಪತ್ನಿಯನ್ನು ಪೊಲೀಸರು ಕರೆಸಿದ್ದರು.
ಮಹಜರು ವೇಳೆ ವಶಕ್ಕೆ ಪಡೆದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಬೇಕೆಂದು ಚಿನ್ನದ ಬಗ್ಗೆ ಕೇಳಿದಾಗ, ನಮಗೆ ಗೊತ್ತಿಲ್ಲ ಎಂದು ಪೊಲೀಸರು ಹೇಳಿದರು.
ಕೂಲಕುಂಶವಾಗಿ ವಿಚಾರಿಸಿದಾಗ ಕಿವಿಯ ಓಲೆ ಕಸದ ಬುಟ್ಟಿಯಲ್ಲಿ ಇತ್ತು ಎಂದು ಹೇಳಿ ಅದನ್ನು ನೀಡಿದ್ದಾರೆ. ಆದರೆ ಕೊರಳ ಚೈನ್ ನಾಪತ್ತೆಯಾಗಿತ್ತು. ಈ ಬಗ್ಗೆ ಕೇಳಿದಾಗ ಸಂಚಾರಿ ಪೇದೆ ಕೆಂಡಾಮಂಡಲವಾದರು.

ಕರವೇ ಕಾರ್ಯಕರ್ತರಾದ ಬಿ.ಜೆ. ಅಣ್ಣಯ್ಯ, ರಾಜೇಶ್, ಗೋವಿಂದರಾಜ್ ದಾಸ್ ಹಾಗೂ ಫಯಾಜುದ್ದೀನ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಶ್ರೀಮತಿ ಗೀತಾರವರಿಗೆ, ದೂರು ನೀಡಿ, ಮೃತರ ದೇಹದಲ್ಲಿದ್ದ ಚಿನ್ನ ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸಿ ಚಿನ್ನವನ್ನು ಪತ್ತೆಹಚ್ಚುವಂತೆ ಮನವಿ ಸಲ್ಲಿಸಲಾಯಿತು.
ನೊಂದ ಕುಟುಂಬದವರು ಕರವೇಯೊಂದಿಗೆ ವಿಚಾರಣೆಗೆ ಸಹಕರಿಸಿದರು.
ಕರವೇಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!