ಪಾವಗಡ :ಸೆ :26:ಪಾವಗಡ ಪಟ್ಟಣದ ಶ್ರೀನಿವಾಸ ನಗರದಲ್ಲಿ ವಿನಾಯಕ ಗೆಳೆಯರ ಬಳಗದ 4 ನೇ ವರ್ಷದ ಅಂಗವಾಗಿ ಮಹಾ ಗಣಪತಿ ಪ್ರತಿಷ್ಠಾಪಿ ಸಲಾಗಿದ್ದು 12 ದಿನಗಳಿಂಧ ಶ್ರದ್ದಾ ಭಕ್ತಿಯಿಂದ ಪೂಜಾ ಕಾರ್ಯಕ್ರಮ ನಡೆದು ಕೊನೆಯ ದಿನವಾದ ಶುಕ್ರವಾರ ಮಹಾಗಣಪತಿಯ ಲಡ್ಡು ಹರಾಜು ಕಾರ್ಯಕ್ರಮ ಏರ್ಪಡಿಸಿದ್ದು ಪಟ್ಟಣದ ಬಹುದೇಕ ಭಕ್ತಾದಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಗಣಪತಿ ಲಡ್ಡು ಯಾರ ಮಡಿಲಿಗೆ ಸೇರುವುದೆಂದು ಕುತೂಹಲ ಕೆರಳಿಸಿ ಕೊನೆಗೆ 61,000 ಸಾವಿರ ರೂ. ಗಳಿಗೆ ಮಾನಂ ಶಶಿಕಿರಣ್ ಅತಿ ಹೆಚ್ಚು ಹರಾಜು ಬಿಡ್ ಕೂಗಿ ಗಣಪತಿ ಲಡ್ಡು ಮಾನಂ ಕುಟುಂಬದ ಮಡಿಲಿಗೆ ಸೇರಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಹಿರಿಯ ರಾಜಕೀಯ ಮುಖಂಡರಾದ ಮಾನಂ ವೆಂಕಟಸ್ವಾಮಿ ರವರಿಗೆ ಗಣಪತಿ ಲಡ್ಡು ಗೌರವಯುತವಾಗಿ ನೀಡಿ ಸನ್ಮಾನಿಸಿದರು.
ಈ ವೇಳೆ ಹೆಲ್ಪ್ ಸೊಸೈಟಿ ಸೇವಾ ಟ್ರಸ್ಟ್ ಅಧ್ಯಕ್ಷ ಮಾನಂ ಶಶಿಕಿರಣ್, ತಾಳೆಮರದಹಳ್ಳಿ ನರೇಶ್, ಬೇಕರಿ ನಾಗರಾಜ್, ಬೆಸ್ತಾ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳಾದ ಸಾಯಿ ಕುಮಾರ್, ಸುನಾಗ್, ಮೂರ್ತಿ, ಸತೀಶ್ ಉಪಸ್ಥಿತರಿದ್ದರು.




















